alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲಿನ್ಯದಲ್ಲಿ ರಾಜಧಾನಿಯನ್ನೂ ಹಿಂದಿಕ್ಕಿದ ಕೋಲ್ಕತ್ತಾ

ದೇಶದ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಹೊಂದಿದ್ದ ರಾಜಧಾನಿ ನವದೆಹಲಿಯನ್ನು ಇದೀಗ ಕೋಲ್ಕತ್ತಾ ಹಿಂದಕ್ಕೆ ಹಾಕಿದೆ. ಇದು ಕೇವಲ 72 ಗಂಟೆಗಳ ಬದಲಾವಣೆಯಾಗಿದ್ದು, ದೇಶದ ಪ್ರಮುಖ ದೈನಿಕವೊಂದು ಈ ಬಗ್ಗೆ ವರದಿ ಮಾಡಿದೆ. ಇದೀಗ ವಾತಾವರಣದ ಗುಣಮಟ್ಟ ಲೆಕ್ಕಾಚಾರ ಹಾಕುವ ಮ್ಯಾಟರ್ ಲೆವೆಲ್(ಪಿಎಂ) ದೆಹಲಿಗಿಂತ ಕೋಲ್ಕತ್ತಾದಲ್ಲಿ ಹೆಚ್ಚು ಕಂಡುಬಂದಿದೆ ಎಂದು ಹೇಳಲಾಗಿದೆ.

ನ್ಯಾಶನಲ್ ಏರ್ ಕ್ವಾಲಿಟಿ ಇಂಡೆಕ್ಸ್ ವೆಬ್ ಸೈಟ್( ರಾಷ್ಟ್ರೀಯ ಅನಿಲ ಗುಣಮಟ್ಟ ಸೂಚ್ಯಂಕ ವೆಬ್ ಸೈಟ್) ಪ್ರಕಾರ ನವದೆಹಲಿಯ ಅತ್ಯಂತ ಕಲುಷಿತ ಪ್ರದೇಶ ಎಂದೇ ಹೆಸರಾಗಿರುವ ಅಶೋಕ ವಿಹಾರದಲ್ಲಿ ಈ ಸೂಚ್ಯಂಕವು 292 ಆಗಿತ್ತು. ಆದರೆ ಕೋಲ್ಕತ್ತಾದ ರವೀಂದ್ರನಾಥ ಭಾರತಿ ವಿವಿಯಲ್ಲಿ 381 ದಾಖಲಾಗಿದೆ. ವಿಕ್ಟೋರಿಯಾ ಮೆಮೋರಿಯಲ್ ನಲ್ಲೂ ಸರಾಸರಿ 310.75 ಸೂಚ್ಯಂಕ ತೋರಿಸಿದೆ.

ನವದೆಹಲಿಯಲ್ಲಿ ಇತ್ತೀಚೆಗಷ್ಟೇ ರಸ್ತೆಗಳಿಗೆ ನೀರು ಚಿಮುಕಿಸುವ ಮೂಲಕ ಮಾಲಿನ್ಯವನ್ನು ಸಣ್ಣಮಟ್ಟಿಗೆ ನಿಯಂತ್ರಣಕ್ಕೆ ತರಲಾಗಿತ್ತು. ಸುಪ್ರೀಂ ಕೋರ್ಟ್ ಕೂಡ ದೀಪಾವಳಿ ಪಟಾಕಿಗಳ ಮೇಲೆ ನಿರ್ಬಂಧ ಹೇರಿದ್ದು ಪ್ರಯೋಜನಕ್ಕೆ ಬಂದಿತ್ತು. ಇದೀಗ ಕೋಲ್ಕತ್ತಾದಲ್ಲಿನ ಪರಿಸರ ಮಾಲಿನ್ಯಕ್ಕೆ ಮೂಗುದಾರ ಹಾಕುವ ಮಾರ್ಗೋಪಾಯ ಕಂಡುಹಿಡಿಯಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...