alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯ ಶವದ ಪಕ್ಕದಲ್ಲೇ 4 ದಿನ ವೃದ್ಧೆ ನಿಂತಿದ್ದೇಕೆ….?

ಕೋಲ್ಕತ್ತಾದಲ್ಲಿ 70 ವರ್ಷದ ಮಹಿಳೆಯೊಬ್ಬಳು ಸುಮಾರು 4 ದಿನಗಳ ಕಾಲ ತನ್ನ ಪತಿಯ ಶವದ ಜೊತೆಗೆ ಕಾಲ ಕಳೆದಿದ್ದಾಳೆ. ಮೂರ್ನಾಲ್ಕು ದಿನಗಳಿಂದ ಮನೆಯ ಹೊರಗೆ ಹಾಕಿದ್ದ ದಿನ ಪತ್ರಿಕೆಯನ್ನೂ ದಂಪತಿ ಕೊಂಡೊಯ್ದಿರಲಿಲ್ಲ. ಡೋರ್ ಬೆಲ್ ಬಾರಿಸಿದ್ರೂ ಪ್ರತಿಕ್ರಿಯೆ ಬರುತ್ತಿರಲಿಲ್ಲ.

ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಪೊಲೀಸರು ಬಂದು ಬಾಗಿಲು ಒಡೆದು ಮನೆಯೊಳಕ್ಕೆ ಪ್ರವೇಶಿಸಿದ್ರು. 82 ವರ್ಷದ ಅಮರ್ ಕುಮಾರ್ ಸನ್ಯಾಲ್ ಹಾಸಿಗೆ ಮೇಲೆ ಶವವಾಗಿ ಮಲಗಿದ್ದ. ಆತನ ಪಕ್ಕದಲ್ಲೇ ಪತ್ನಿ ಹಸಿ ರಾಣಿ ಸನ್ಯಾಲ್ ನಿಶ್ಚಲವಾಗಿ ನಿಂತಿದ್ಲು.

ಪೊಲೀಸರ ಯಾವ ಪ್ರಶ್ನೆಗೂ ಆಕೆ ಉತ್ತರಿಸಿಲ್ಲ. ಪತಿಯ ಸಾವಿನಿಂದ ತೀವ್ರ ಆಘಾತಗೊಂಡಿರಬಹುದು ಅಂತಾ ಹೇಳಲಾಗ್ತಿದೆ. ಪೊಲೀಸರ ಮಾಹಿತಿ ಪ್ರಕಾರ ವೃದ್ಧ ಸುಮಾರು 4 ದಿನಗಳ ಹಿಂದೆಯೇ ಮೃತಪಟ್ಟಿದ್ದ. ಮಹಿಳೆಯನ್ನು ಸದ್ಯ ವೃದ್ಧಾಶ್ರಮದಲ್ಲಿ ಇಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...