alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ, ಮಕ್ಕಳ ಎದುರೇ ಸಜೀವ ದಹನವಾದ ಕೋಲಾರ ಉದ್ಯಮಿ

Burning car

ಕೊಯಂಬತ್ತೂರು ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕೋಲಾರ ಮೂಲದ ಉದ್ಯಮಿ ಸಜೀವ ದಹನವಾಗಿದ್ದಾನೆ. ಕೆಜಿಎಫ್ ನ ಚಿನ್ನದ ವ್ಯಾಪಾರಿ, 38 ವರ್ಷದ ದಿಲೀಪ್ ಕುಮಾರ್ ಮೃತ ದುರ್ದೈವಿ. ದಿಲೀಪ್, ಆತನ ಪತ್ನಿ ಆಶಾ ಮತ್ತು ಇಬ್ಬರು ಮಕ್ಕಳು ಬೆಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ರು.

ಮಧುಕ್ಕರೈ ಎಂಬಲ್ಲಿ ಇದ್ದಕ್ಕಿದ್ದಂತೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಪತ್ನಿ ಮತ್ತು ಮಕ್ಕಳು ಕೂಡಲೇ ಕಾರಿನಿಂದ ಇಳಿದ್ರು. ಆದ್ರೆ ಸೀಟ್ ಬೆಲ್ಟ್ ಹಾಕಿಕೊಂಡಿದ್ರಿಂದ ದಿಲೀಪ್ ಗೆ ಬೇಗನೆ ಅದನ್ನು ತೆಗೆದು ಹಾಕಲು ಸಾಧ್ಯವಾಗಲಿಲ್ಲ. ಕ್ಷಣಮಾತ್ರದಲ್ಲಿ ಬೆಂಕಿ ಆವರಿಸಿದ್ರಿಂದ, ಡ್ರೈವರ್ ಸೀಟ್ ನಲ್ಲೇ ಸಜೀವ ದಹನವಾಗಿದ್ದಾನೆ.

ಶನಿವಾರ ರಾತ್ರಿ ದಿಲೀಪ್ ಕುಟುಂಬದವರೊಂದಿಗೆ ಕೊಚ್ಚಿಗೆ ಹೊರಟಿದ್ರು. ಬೆಳಗಿನ ಜಾವ 2 ಗಂಟೆ ವೇಳೆಗೆ ಈ ದುರಂತ ಸಂಭವಿಸಿದೆ. ಮೃತ ದಿಲೀಪ್ ಕಾರ್ ಡೀಲರ್ ಕೂಡ ಆಗಿದ್ದ. ಸಹೋದರನ ಮನೆಗೆ ಹೊರಟಿದ್ದ ದಿಲೀಪ್, ಪತ್ನಿ ಮತ್ತು ಮಕ್ಕಳ ಕಣ್ಣೆದುರಲ್ಲೇ ಬೆಂಕಿಗೆ ಆಹುತಿಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...