alex Certify
ಕನ್ನಡ ದುನಿಯಾ       Mobile App
       

Kannada Duniya

ಟೈಂ ಪಾಸ್ ಗಾಗಿ ಭಿಕ್ಷೆ ಬೇಡ್ತಿದ್ದಾಳೆ ಈ ಮಹಿಳೆ…!

ಭಾರತದಲ್ಲಿ ಭಿಕ್ಷುಕರ ಸಂಖ್ಯೆಯೇನೂ ಕಡಿಮೆಯಿಲ್ಲ. ಭಿಕ್ಷುಕರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೂ ಜನರು ಭಿಕ್ಷೆ ಬೇಡೋದನ್ನು ಬಿಡೋದಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ಭಿಕ್ಷೆ ಬೇಡಲು ಕಾರಣ ಕೇಳಿದ್ರೆ ನೀವು ದಂಗಾಗ್ತಿರಾ.

ರಾಂಚಿಯ ಧುರ್ವ ಸುರಜ್ಮಣಿ ದೇವಿ ಹೆಸರಿನ ಮಹಿಳೆ ಬಡವಳಲ್ಲ. ಮೂರು ಮಕ್ಕಳ ತಾಯಿಗೆ ಸೊಸೆ ಬಂದಿದ್ದಾಳೆ. ಮಕ್ಕಳ ಜೊತೆ ಮೊಮ್ಮಕ್ಕಳಿದ್ದಾರೆ. ತುಂಬು ಕುಟುಂಬದಲ್ಲಿರುವ ಮಹಿಳೆಗೆ ಆರೋಗ್ಯದ ಬಗ್ಗೆ ಚಿಂತೆ ಕಾಡ್ತಿದೆ. ಅನಾರೋಗ್ಯ ಕಾಡದಿರಲಿ ಎನ್ನುವ ಕಾರಣಕ್ಕೆ ಭಿಕ್ಷೆ ಬೇಡ್ತಾಳೆ ಸುರಜ್ಮಣಿ ದೇವಿ.

ಕಚೇರಿ ಸಮಯಕ್ಕೆ ಭಿಕ್ಷೆ ಬೇಡಲು ಬರುವ ಮಹಿಳೆ ಸಂಜೆ ವೇಳೆಗೆ ಮನೆಗೆ ಹಿಂತಿರುಗುತ್ತಾಳೆ. ಪ್ರತಿ ದಿನ ಭಿಕ್ಷೆ ಬೇಡಿ ಸುಮಾರು ಎರಡು ನೂರು ರೂಪಾಯಿ ಸಂಪಾದನೆ ಮಾಡ್ತಾಳಂತೆ ಮಹಿಳೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯಿದೆ. ಮಹಿಳೆ ಮಕ್ಕಳ ಜೊತೆ ಮಾತನಾಡಿ ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...