alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಿ ಆದಿತ್ಯನಾಥ್ ಆಸ್ತಿ ಎಷ್ಟು ಗೊತ್ತಾ..?

yogi-1-new-580x395

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಂಪುಟದ ಸಚಿವರಿಗೆಲ್ಲ ಆಸ್ತಿ ವಿವರ ಘೋಷಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಹಾಗಿದ್ರೆ ಯೋಗಿ ಆದಿತ್ಯನಾಥ್ ಅವರ ಆಸ್ತಿ ಎಷ್ಟು ಅನ್ನೋದು ಎಲ್ಲರಲ್ಲೂ ಇರೋ ಕುತೂಹಲ. 2014ರ ಲೋಕಸಭಾ ಚುನಾವಣೆ ವೇಳೆ ಯೋಗಿಯ ಆಸ್ತಿ ಒಟ್ಟು 72 ಲಕ್ಷ ರೂಪಾಯಿ ಇತ್ತು.

30 ಸಾವಿರ ನಗದು, ದೆಹಲಿಯಲ್ಲಿ 2, ಗೋರಖ್ಪುರದಲ್ಲಿ 2 ಬ್ಯಾಂಕ್ ಖಾತೆ ಇದೆ. ಅದರಲ್ಲಿ 22 ಲಕ್ಷ ರೂಪಾಯಿ ಜಮಾ ಆಗಿತ್ತು. ಇದಲ್ಲದೆ 1 ಲಕ್ಷ ರೂಪಾಯಿಯ ರಿವಾಲ್ವರ್ ಹಾಗೂ 80 ಸಾವಿರ ರೂಪಾಯಿಯ ರೈಫಲ್ ಇದೆ.

ಯೋಗಿ ಆದಿತ್ಯನಾಥ್ ಅವರು 18,000 ರೂಪಾಯಿ ಬೆಲೆಬಾಳುವ ಸ್ಮಾರ್ಟ್ ಫೋನ್ ಖರೀದಿಸಿದ್ದಾರಂತೆ, 2 ಸಾವಿರ ರೂಪಾಯಿಯ ವಾಚ್ ಕೂಡ ಕಟ್ತಾರೆ. ಕಿವಿಗಳಿಗೆ ಅಷ್ಟಧಾತುಗಳ ಕುಂಡಲ ಧರಿಸ್ತಾರೆ. ಇದನ್ನು ಹೊರತುಪಡಿಸಿದ್ರೆ ರುದ್ರಾಕ್ಷಿ ಪೋಣಿಸಿರುವ ಚಿನ್ನದ ಚೈನ್ ಅವರ ಬಳಿಯಿದೆ. ಆಭರಣಗಳ ಒಟ್ಟು ಮೌಲ್ಯ ಸುಮಾರು 45,000 ರೂಪಾಯಿ.

ಸಿಎಂ ಆದ್ಮೇಲೆ ಯೋಗಿ ಆದಿತ್ಯನಾಥ್ ಸರ್ಕಾರಿ ಮರ್ಸಿಡಿಸ್ ಕಾರಿನಲ್ಲಿ ಓಡಾಡ್ತಿದ್ದಾರೆ. ಇದಕ್ಕೂ ಮುನ್ನ ಫಾರ್ಚೂನರ್ ಕಾರನ್ನು ಬಳಸುತ್ತಿದ್ರು. ಯೋಗಿ ಹೆಸರಿನಲ್ಲಿ ಇನ್ನೂ ಮೂರು ಕಾರುಗಳು ಇವೆಯಂತೆ. ಟಾಟಾ ಸಫಾರಿ, ಇನ್ನೋವಾ ಹಾಗೂ ಫಾರ್ಚೂನರ್.

ಯೋಗಿ ಆದಿತ್ಯನಾಥ್ ಅವರ ಹೆಸರಲ್ಲಿ ಯಾವುದೇ ಜಮೀನಾಗ್ಲಿ, ಮನೆಯಾಗ್ಲಿ, ಕುಟುಂಬದಿಂದ ಬಂದ ಆಸ್ತಿಯಾಗ್ಲೀ ಇಲ್ಲ. ಜೊತೆಗೆ ಯಾವುದೇ ಸಾಲದ ಹೊರೆ ಕೂಡ ಇಲ್ಲ. 1994ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಆದಿತ್ಯನಾಥ್ 1998ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ್ರು. ಅಲ್ಲಿಂದ ಇದುವರೆಗೆ ಯೋಗಿ ಆದಿತ್ಯನಾಥ್ ಸಂಪಾದಿಸಿರೋ ಒಟ್ಟು ಆಸ್ತಿ 74 ಲಕ್ಷ ರೂಪಾಯಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...