alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ದುಲ್ ಕಲಾಂ ಅವರ ಜೀವನಕ್ಕೆ ತಿರುವು ನೀಡಿದ್ದು ಶಿಕ್ಷಕ

ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ದೇಶದ ಅಸಂಖ್ಯಾತ ಮಂದಿಗೆ ಸ್ಪೂರ್ತಿ. ಕಡು ಬಡತನದ ಮಧ್ಯೆ ರಾಷ್ಟ್ರಪತಿ ಪದವಿ ತನಕ ಅವರು ಏರಿದ ಎತ್ತರ ಒಂದು ಅದ್ಬುತ ಕಥನದಂತೆ. ಅಬ್ದುಲ್ ಕಲಾಂ ಅವರು ವಿಜ್ಞಾನಿಯಾಗಲು ಪ್ರೇರಣೆಯಾಗಿದ್ದ ಘಟನೆ ಇಲ್ಲಿದೆ ನೋಡಿ.

ತಮಿಳುನಾಡಿನ ರಾಮೇಶ್ವರಂ ನಲ್ಲಿ ಜನಿಸಿದ್ದ ಅಬ್ದುಲ್ ಕಲಾಂರವರ ವಯಸ್ಸು ಆಗ ಕೇವಲ 10. ಐದನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಕಲಾಂ ಅವರಿಗೆ ವಿಮಾನಗಳನ್ನು ಕಂಡರೆ ಆಕರ್ಷಣೆ. ಪೈಲೆಟ್ ಆಗಬೇಕೆಂಬ ಕನಸನ್ನು ಆಗ ಅವರು ಕಾಣುತ್ತಿದ್ದರು. ಬಾಲ್ಯದಲ್ಲೇ ಶಿಕ್ಷಕರಿಗೆ ಪ್ರಶ್ನೆಗಳನ್ನು ಕೇಳುತ್ತಾ ಶಿಕ್ಷಕರಿಗೆ ಅಚ್ಚುಮೆಚ್ಚಿನವರಾಗಿದ್ದರು.

ಒಮ್ಮೆ ವಿಜ್ಞಾನ ಶಿಕ್ಷಕ ಶಿವಸುಬ್ರಮಣ್ಯ ಅಯ್ಯರ್ ಎಂಬವರು ಬೋರ್ಡಿನ ಮೇಲೆ ಹಕ್ಕಿಯ ಚಿತ್ರ ಬರೆದು ಹೇಗೆ ಹಕ್ಕಿ ತನ್ನ ಹಾರಾಟ ನಡೆಸುತ್ತದೆ ಎಂಬುದನ್ನು ವಿವರಿಸಿದ್ದಾರೆ. ಅಲ್ಲದೇ ವಿಮಾನ ಹಾರಾಟಕ್ಕೂ ಇದೇ ಸೂತ್ರವನ್ನು ಅನುಸರಿಸುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಅಂದು ಸಂಜೆಯೇ ರಾಮೇಶ್ವರಂ ನ ಸಮುದ್ರ ತೀರಕ್ಕೆ ಮಕ್ಕಳನ್ನು ಕರೆದೊಯ್ದು ಹಕ್ಕಿಗಳ ಹಾರಾಟವನ್ನು ತೋರಿಸಿದ್ದರಲ್ಲದೇ ಅದು ಹೇಗೆ ರೆಕ್ಕೆಯ ಸಹಾಯದಿಂದ ತನ್ನ ಪಥವನ್ನು ಬದಲಿಸುತ್ತದೆಂಬ ಸಂಗತಿಯನ್ನು ವಿವರಿಸಿದ್ದಾರೆ. ಇದು ಬಾಲಕ ಅಬ್ದುಲ್ ಕಲಾಂ ಅವರ ಮೇಲೆ ಗಾಢ ಪರಿಣಾಮ ಬೀರಿದ್ದು, ಭೌತಶಾಸ್ತ್ರದ ಕುರಿತು ಆಸಕ್ತಿ ಮೂಡುವಂತೆ ಮಾಡಿದೆ. ಇದನ್ನು ಸ್ವತಃ ಅಬ್ದುಲ್ ಕಲಾಂ ಅವರೇ ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...