alex Certify
ಕನ್ನಡ ದುನಿಯಾ       Mobile App
       

Kannada Duniya

ಯುವ ಜೋಡಿಗಳಿಗೆ ಶಾಸಕರೇ ಆಯೋಜಿಸಿದ್ದರು ಚುಂಬನ ಸ್ಪರ್ಧೆ

ಜಾರ್ಖಂಡ್ ನಲ್ಲಿ ಬುಡಕಟ್ಟು ಜನಾಂಗದವರಿಗಾಗಿ ಚುಂಬನ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಪರ್ಯಾಸ ಅಂದ್ರೆ ಶಾಸಕ ಸೈಮನ್ ಮರಾಂಡಿ ಅವರ ಸಮ್ಮುಖದಲ್ಲೇ ಈ ವಿಚಿತ್ರ ಸ್ಪರ್ಧೆ ನಡೆದಿದೆ. ಪಕುರ್ ಜಿಲ್ಲೆಯಲ್ಲಿ ನಡೆದ ಜಾತ್ರೆಯೊಂದರ ಹೈಲೈಟ್ ಇದು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರೆಲ್ಲ ಬುಡಕಟ್ಟು ಸಮುದಾಯದವರು. ಎಲ್ಲರೂ ವಿವಾಹಿತ ಜೋಡಿಗಳು. ಪ್ರತಿ ವರ್ಷ ಲತ್ತಿಪರಾ ಗ್ರಾಮದಲ್ಲಿ ನಡೆಯುವ ಸಿಡೊ ಕನ್ಹು ಎಂಬ ಜಾತ್ರೆಯಲ್ಲಿ ಖುದ್ದು ಶಾಸಕ ಸೈಮನ್ ಮರಾಂಡಿ ಈ ವಿಲಕ್ಷಣ ಸ್ಪರ್ಧೆಯನ್ನು ಆಯೋಜಿಸುತ್ತಾರಂತೆ.

ಜಾರ್ಖಂಡ್ ಮುಕ್ತಿ ಮೋರ್ಚಾ ಮುಖಂಡ ಶ್ಯಾಮ್ ಯಾದವ್ ಸೇರಿದಂತೆ, ವಿವಿಧ ರಾಜಕೀಯ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಸಕರೇ ಖುದ್ದಾಗಿ ಇಂತಹ ಚುಂಬನ ಸ್ಪರ್ಧೆಯನ್ನು ಆಯೋಜಿಸಿರುವುದು ಚರ್ಚೆಗೂ ಗ್ರಾಸವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...