alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಬ್ಬ ಕ್ರೀಡಾತಾರೆ ಬೆಳ್ಳಿತೆರೆಗೆ ಎಂಟ್ರಿ

kirti azad 78

ದರ್ಬಾಂಗ್ (ಬಿಹಾರ): ಕ್ರೀಡೆ, ಕ್ರೀಡಾಪಟುಗಳ ಜೀವನ ಆಧರಿಸಿದ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಅದೇ ರೀತಿ ಕ್ರೀಡಾಪಟುಗಳು ಕೂಡ ಬೆಳ್ಳಿ ತೆರೆಯಲ್ಲಿ ಮಿಂಚಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ ಜೀವನಾಧಾರಿತ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೀಗ ಮತ್ತೊಬ್ಬ ಕ್ರಿಕೆಟಿಗ ಬೆಳ್ಳಿ ತೆರೆಗೆ ಎಂಟ್ರಿ ಕೊಡಲಿದ್ದಾರೆ. ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದರಾಗಿರುವ ಕೀರ್ತಿ ಆಜಾದ್ ‘Kirket’ಎಂಬ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ವಿಶಾಲ್ ವಿಜಯ್ ಕುಮಾರ್ ಸ್ಕ್ರಿಪ್ಟ್ ಮಾಡಿದ್ದು, ಸೋನು ಝಾ ನಿರ್ಮಾಣ ಮಾಡಲಿದ್ದಾರೆ. ಸನ್ನಿಡಿಯೋಲ್ ಅಭಿನಯದ ‘ಘಾಯಲ್ ಒನ್ಸ್ ಎಗೇನ್’ ಚಿತ್ರದ ನಿರ್ದೇಶಕ ಜೋಗಿಂದರ್ ಸಿಂಗ್ ‘kirket’ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಬಿಹಾರ ಮೂಲದ ಕೀರ್ತಿ ಆಜಾದ್ ದೆಹಲಿಯಲ್ಲಿ ಸಂಸದರಾಗಿದ್ದಾರೆ. ಭಾರತ ಮೊದಲ ವಿಶ್ವಕಪ್ ಗೆದ್ದ ತಂಡವನ್ನು ಅವರು ಪ್ರತಿನಿಧಿಸಿದ್ದರು. ಕೀರ್ತಿ ಆಜಾದ್, ತಾವು ಚಿತ್ರದಲ್ಲಿ ಅಭಿನಯಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪಾಟ್ನಾ, ದರ್ಬಾಂಗ್, ನೋಯ್ಡಾ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ. ಈ ಚಿತ್ರದಲ್ಲಿ ಸಂಸದ ಶತ್ರುಘ್ನ ಸಿನ್ಹ, ಮನೋಜ್ ಪ್ರಭಾಕರ್, ಅಜಯ್ ಜಡೇಜ ಮೊದಲಾದವರು ನಟಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...