alex Certify
ಕನ್ನಡ ದುನಿಯಾ       Mobile App
       

Kannada Duniya

“ರಾತ್ರಿ ಪುರುಷರು ಮನೆಯಿಂದ ಹೊರಗೆ ಬರಬೇಡಿ’’

kiran

ಚಂಡೀಗಢದಲ್ಲಿ ಕಿರುಕುಳ ಹಾಗೂ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಕಿರಣ್ ಖೇರ್ ಮಹಿಳೆಯರ ಬೆಂಬಲಕ್ಕೆ ನಿಂತಿದ್ದಾರೆ. ಇದೇ ವೇಳೆ ಖೇರ್ ಪುರುಷರಿಗೊಂದು ಸಲಹೆ ನೀಡಿದ್ದಾರೆ. ಚಂಡೀಗಢ ಸಂಸದೆ ಕಿರಣ್ ಖೇರ್ ಪ್ರಕಾರ ರಾತ್ರಿ ಪುರುಷರು ಮನೆಯಿಂದ ಹೊರಗೆ ಬರದಿರುವುದು ಸೂಕ್ತ ಎಂದಿದ್ದಾರೆ.

ಪುರುಷರ ಮೈಂಡ್ ಸೆಟ್ ಬದಲಾಗಬೇಕು. ಪುರುಷರಿಂದಲೇ ಸಮಸ್ಯೆಯಾಗ್ತಿದೆ. ಹಾಗಾಗಿ ರಾತ್ರಿ ವೇಳೆ ಅವರು ಮನೆಯಿಂದ ಹೊರ ಬರದೆ ಹೋದ್ರೆ ಎಲ್ಲ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಎಂದಿದ್ದಾರೆ ಕಿರಣ್ ಖೇರ್. ರಾತ್ರಿ 7 ಗಂಟೆ ನಂತ್ರ ಪುರುಷರು ಮನೆಯಿಂದ ಹೊರಗೆ ಬರದಂತೆ ನಿಯಮ ಮಾಡಬೇಕು. ಪುರುಷರು ಮನೆಯಿಂದ ಹೊರಗೆ ಕಾಣಿಸಿಕೊಳ್ಳದೆ ಹೋದ್ರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆಂದು ಖೇರ್ ಹೇಳಿದ್ದಾರೆ.

ಬಾಲಿವುಡ್ ನಟಿ ಹಾಗೂ ಹಿರಿಯ ನಟ ಅನುಪಮ್ ಖೇರ್ ಪತ್ನಿ ಕಿರಣ್ ಖೇರ್ ಚಂಡೀಗಢದ ಸಂಸದೆ. ಚಂಡೀಗಢದಲ್ಲಿ ಇತ್ತೀಚಿಗೆ ನಡೆದ ಹರ್ಯಾಣ ಬಿಜೆಪಿ ಅಧ್ಯಕ್ಷನ ಮಗನ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿರಣ್ ಖೇರ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...