alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಗುಲ ನೋಡಿದ್ರೆ ಭಯಪಡ್ತಾರೆ ಜನ…!

ಅಲ್ಲಿ ಶಿವನ ದೇವಸ್ಥಾನವಿದೆ ಆದರೆ, ಪೂಜೆ ನಡೆಯುವುದಿಲ್ಲ. ದೇವರಿದ್ದರೂ ಅಲ್ಲಿಗೆ ಹೋಗುವವರಿಗೆ ಭಯ ಕಡಿಮೆಯಾಗುತ್ತಿಲ್ಲ. ಕತ್ತಲಾದರೆ ಸಾಕು, ಆ ದೇಗುಲದ ಕಡೆ ತಲೆ ಹಾಕಿ ಮಲಗೋದಕ್ಕೆ ಜನರು ಹೆದರುತ್ತಾರೆ. ಸಂಜೆಯಾಗುತ್ತಿದ್ದಂತೆ ಒಂದು ನರಪಿಳ್ಳೆಯೂ ಈ ಪ್ರದೇಶದ ಸುತ್ತ ಸುಳಿಯುವುದಿಲ್ಲ.

ಈ ದೇಗುಲ ನೋಡಿದರೆ ಸಾಕು ಜನರು ಭಯಪಡುತ್ತಾರೆ. ಇನ್ನು ಸೂರ್ಯ ಮುಳುಗುವ ಸಮಯ ಹತ್ತಿರವಾಗುತ್ತಿದ್ದಂತೆ ಮತ್ತೊಂದು ಭಯ ಹುಟ್ಟಿಕೊಳ್ಳುತ್ತದೆ. ಶಿವಾಲಯದ ಕಡೆ ಒಂದು ಪ್ರಾಣಿಯೂ ಸಹ ಓಡಾಡುವುದಿಲ್ಲ. ಬದಲಿಗೆ ಮಂದಿರ ಸುತ್ತ ಶಾಂತ-ಮೌನ ಆವರಿಸಿಕೊಳ್ಳುತ್ತದೆ. ಅಂದಹಾಗೆ ಈ ದೇಗುಲ ಇರುವುದು ಎಲ್ಲಿ ಗೊತ್ತಾ? ರಾಜಸ್ಥಾನದ ಬರ್ಮಾರ್ ಜಿಲ್ಲೆಯಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿರುವ ‘ಹಾತ್ಮ ಗ್ರಾಮ’ ದ ಕಿರಾಡು ಎನ್ನುವ ಸ್ಥಳದಲ್ಲಿ ಈ ವಿಚಿತ್ರ ಶಿವನ ಮಂದಿರವಿದೆ.

ಭಾರತದಲ್ಲಿ ಯಾವುದೇ ದೇವಸ್ಥಾನ ಅಂದರು ಅಲ್ಲಿ ಜನರು ಇದ್ದೇ ಇರುತ್ತಾರೆ. ಆದರೆ, ಈ ದೇವಾಲಯ ಮಾತ್ರ ಎಲ್ಲಕ್ಕಿಂತ ಸಂಪೂರ್ಣ ವಿಭಿನ್ನ…! ಇಲ್ಲಿಯ ಶಿವನಿಗೆ ಅರ್ಚಕನೂ ಇಲ್ಲ, ಪೂಜೆಯೂ ಇಲ್ಲ. ಗಂಧ-ಪ್ರಸಾದದ ಸುವಾಸನೆ ಅಂತೂ ಇಲ್ವೇ ಇಲ್ಲ. ಶ್ರದ್ಧಾ-ಭಕ್ತಿಯಿಂದ ತುಂಬಿ-ತುಳುಕಬೇಕಿದ್ದ ಈ ಮಂದಿರ ಭಯದ ಆಲಯವಾಗಿದೆ.

ಈ ದೇವಸ್ಥಾನದಲ್ಲಿ ರಾತ್ರಿ ವೇಳೆ ಚಿತ್ರ-ವಿಚಿತ್ರವಾದ ಶಬ್ಧ ಕೇಳಿಬರುತ್ತದೆ. ಅದು ಎಲ್ಲಿಂದ ಬರುತ್ತೆ, ಹೇಗೆ ಬರುತ್ತೆ ಅನ್ನೋದು ಮಾತ್ರ ನಿಗೂಢ…! ಇವತ್ತಿಗೂ ಇಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಅದೇ ಕಾರಣಕ್ಕೆ ಯಾರೂ ಈ ಪಾಳುಬಿದ್ದ ಶಿವನ ಮಂದಿರದ ಹತ್ತಿರ ಸುಳಿಯಲು ಭಯಪಡುವಂತಾಗಿದೆ. ಒಂದು ಕಡೆ ಕಲ್ಲಾಗುತ್ತಾರೆ ಅನ್ನೋ ಭಯವಿದ್ದರೆ, ಇನ್ನೊಂದು ಕಡೆ ಇಲ್ಲಿ ಕೇಳಿಬರುವ ಭಯಾನಕ ಸದ್ದು, ಎಂತಹ ಎಂಟೆದೆ ಭಂಟನನ್ನೂ ಅರೆಕ್ಷಣ ಅಲ್ಲಿ ನಿಲ್ಲದಂತೆ ಮಾಡುತ್ತದೆಯಂತೆ.

ಸಾವಿರಾರು ವರ್ಷಗಳ ಹಳೆಯ ಕಿರಾಡು ದೇವಾಲಯ ನಿಜ ಹೇಳಬೇಕೆಂದರೆ ಅಲ್ಲಿನ ಜನರಿಂದಲೇ ಮೂಲೆಗುಂಪಾಗಿರೋ ದೇವಸ್ಥಾನ. ಆದರೆ, ಇದಕ್ಕಿರುವ ಒಂದು ಅಸಾಧಾರಣ ವಿಶೇಷತೆಯಿಂದ ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಿದೆ. ಕೆಲವು ರಹಸ್ಯಗಳನ್ನು ನಂಬಲಾಗದಿದ್ದರೂ, ತಳ್ಳಿ ಹಾಕಲಾಗುವಂತಿಲ್ಲ ಅನ್ನುವ ನಾಣ್ಣುಡಿಗೆ ಈ ಮಂದಿರ ಒಂದು ಉತ್ತಮ ಉದಾಹರಣೆಯಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...