alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಕ್ಕೆ ತೆರಳಲು ವೀಸಾಗಾಗಿ ಕಾಯುತ್ತಿದ್ದ ಟೆಕ್ಕಿಗೆ ಬಂದೆರಗಿದ್ದು ಸಾವು

28 ವರ್ಷದ ಅಮನ್ ರಸ್ವಂತ ಕಳೆದ 10 ವರ್ಷಗಳಿಂದ  ಚಂಡೀಗಢದಲ್ಲಿ ನೆಲೆಸಿದ್ರು. ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಲೇ ಇದ್ರು. ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡ್ತಾ ಇದ್ದ ಅಮನ್ ವಿದೇಶ ಪ್ರವಾಸದ ಕನಸು ಶಾಶ್ವತವಾಗಿ ಭಗ್ನವಾಗಿದೆ.

ಎಂಜಿನಿಯರಿಂಗ್ ಪದವೀಧರ ಅಮನ್ ಗೆ ಇಮಿಗ್ರೇಶನ್ ಸಿಕ್ಕಿತ್ತು, ವೀಸಾ ದೊರೆಯಬೇಕಿತ್ತಷ್ಟೆ. ಅಮನ್ ವೀಸಾಗಾಗಿ ಕಾಯ್ತಿದ್ದ ಮನೆಯವರಿಗೆ ಬಂದಿದ್ದು ಆತನ ಸಾವಿನ ಸುದ್ದಿ. ಮಗನ ವಿದೇಶ ಪ್ರವಾಸದ ಕನಸು ನನಸಾಗಲಿ ಅಂತಾ ಪ್ರಾರ್ಥಿಸಿ ಹೆತ್ತವರು 21 ದಿನಗಳ ಉಪವಾಸ ವೃತ ಕೂಡ ನಡೆಸುತ್ತಿದ್ರು.

ಕೆಲಸ ಮುಗಿಸಿಕೊಂಡು ಪ್ರತಿದಿನ ಅಮನ್ ಬೆಳಗಿನ ಜಾವ 2 ಗಂಟೆಗೆ ಮನೆಗೆ ಬರ್ತಿದ್ದ. ಆದ್ರೆ ಗುರುವಾರ ಬೆಳಗಿನ ಜಾವವಾದ್ರೂ ಅಮನ್ ಪತ್ತೆಯಿರಲಿಲ್ಲ. ಆತನ ಜೊತೆಗಿದ್ದ ಕಸಿನ್ ನಿತೇಶ್ ಹತ್ತಾರು ಬಾರಿ ಫೋನ್ ಮಾಡಿದ್ದಾನೆ. ಬೆಳಗ್ಗೆ ಪೊಲೀಸರಿಂದ ನಿತೇಶ್ ಗೆ ಕರೆ ಬಂದಿತ್ತು.

ಅಮನ್ ಇನ್ನಿಲ್ಲ ಅನ್ನೋ ಆಘಾತಕಾರಿ ಸುದ್ದಿಯನ್ನು ಪೊಲೀಸರು ನೀಡಿದ್ರು. ಯಮನ ರೂಪದಲ್ಲಿ ಬಂದ ರೇಂಜ್ ರೋವರ್ ಕಾರು ಅಮನ್ ನನ್ನು ಬಲಿ ಪಡೆದಿತ್ತು. ಮಗನ ಹಠಾತ್ ನಿಧನದಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...