alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತಿಗೆ-ಮೈದುನನ ರಾಸಲೀಲೆಗೆ ಬಲಿಯಾದ ಅಣ್ಣ…!

ಅತ್ತಿಗೆ ತಾಯಿ ಸಮಾನ ಎನ್ನುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಯಾವ ಸಂಬಂಧಗಳಿಗೂ ಬೆಲೆ ಇಲ್ಲದಂತಾಗಿದೆ. ಅತ್ತಿಗೆಯನ್ನು ಮೋಹಿಸುವ ಮೈದುನ, ಗಂಡನಿಗೆ ಮೋಸ ಮಾಡಿ ಮೈದುನನ ಜತೆ ಹಾಸಿಗೆ ಹಂಚಿಕೊಳ್ಳುವ ಅತ್ತಿಗೆಯಂದಿರೂ ಇದ್ದಾರೆ. ಇಂತಹದ್ದೆ ಒಂದು ಘಟನೆ ಗುಜರಾಥ್ ನ ರಾಜ್ ಕೋಟ್ ನಲ್ಲಿ ನಡೆದಿದೆ.

ರಾಜ್ ಕೋಟ್ ನ ನ್ಯೂ ಥೋರ್ ಲಾ ಎಂಬ ಪ್ರದೇಶದಲ್ಲಿ ಮನೆಮಾಡಿಕೊಂಡಿದ್ದ ಮಮತಾ, ಸುನೀಲ್ ದಂಪತಿ ಚೆನ್ನಾಗಿಯೇ ಇದ್ದರು. ಆದರೆ ಇತ್ತೀಚೆಗೆ ಮಮತಾಗೆ ಸುನೀಲ್ ತಮ್ಮ ಅಜಯ್ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಅಜಯ್ ಕೂಡ ಅತ್ತಿಗೆಯತ್ತ ಆಕರ್ಷಿತನಾಗಿದ್ದಾನೆ. ಅಣ್ಣನಿಲ್ಲದ ವೇಳೆಯಲ್ಲಿ ಅತ್ತಿಗೆಯ ಜತೆ ರಾಸಲೀಲೆಯಲ್ಲಿ ತೊಡಗಿಕೊಳ್ಳುತ್ತಿದ್ದ. ತಮ್ಮಿಬ್ಬರ ಕಳ್ಳ ಸಂಬಂಧಕ್ಕೆಲ್ಲಿ ಸುನಿಲ್ ಅಡ್ಡ ಬರುತ್ತಾನೋ ಎಂದು ಅವನನ್ನು ಕೊಲೆ ಮಾಡುವ ಮಾಸ್ಟರ್ ಪ್ಲಾನ್ ಕೂಡ ಅತ್ತಿಗೆ-ಮೈದುನ ಮಾಡಿಬಿಟ್ಟರು.

ಎಂದಿನಿಂತೆ ಸುನೀಲ್ ಮನೆಗೆ ಬಂದಾಗ ಮಮತಾ ಗಂಡನಿಗೆ ನಾಟಕದ ಪ್ರೀತಿ ತೋರಿಸಿ ತನ್ನ ಕೈಯಾರೆ ಮತ್ತು ಬೆರೆಸಿದ ಊಟ ತಿನ್ನಿಸಿದ್ದಾಳೆ. ಊಟ ತಿಂದ ಸುನೀಲ್ ಗೆ ಮಂಪರು ಕವಿಯುತ್ತಿದ್ದಂತೆ ಅಜೇಯ್ ಹಿಂದಿನಿಂದ ಬಂದು ಸುನೀಲ್ ಕತ್ತಿಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಹೆಣವನ್ನು ಮನೆಯ ಹತ್ತಿರವಿದ್ದ ನದಿಗೆ ಎಸೆದು ಇಬ್ಬರು ರಾತ್ರೋರಾತ್ರಿಯೇ ಪರಾರಿಯಾಗಿದ್ದಾರೆ.

ಸುನೀಲ್ ತಂದೆ ಮಗನ ಸಾವಿನ ನಂತರ ಪೊಲೀಸರಿಗೆ ತನ್ನ ಮಗ ಅಜಯ್ ಹಾಗೂ ಸೊಸೆ ಮಮತಾ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಅನುಮಾನ ಬಂದ ಪೊಲೀಸರು ಇವರಿಬ್ಬರ ಫೋನ್ ನೆಟ್ ವರ್ಕ್ ಟ್ರ್ಯಾಕ್ ಮಾಡಿ ಇಬ್ಬರನ್ನೂ ಬಂಧಿಸಿ ವಿಚಾರಿಸಿದಾಗ ತಮ್ಮ ಕ್ರೂರ ಕೃತ್ಯದ ಕುರಿತು ಇಬ್ಬರು ಬಾಯ್ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...