alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಿಂದ ಇಳಿದು ಕಿಕಿ ಡಾನ್ಸ್ ಮಾಡಿದ್ದು ದುಬಾರಿಯಾಯ್ತು…!

ಕಿಕಿ ಚಾಲೆಂಜ್ ಗೆ ಸಂಬಂಧಿಸಿದಂತೆ ದಿನಕ್ಕೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈಗ ವೈರಲ್ ಆದ ವಿಡಿಯೋ ಒಂದು ಮುಂಬೈ ರೈಲ್ವೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ಮುಂಬೈ ಲೋಕಲ್ ಟ್ರೈನ್ ನಿಂದ ಇಳಿದು ಹುಡುಗನೊಬ್ಬ ಡಾನ್ಸ್ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದೆ. ಕಿಕಿ ಚಾಲೆಂಜ್ ಮಾಡಿದವನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮುಂಬೈ ರೈಲ್ವೆ ಇಲಾಖೆಗೆ ಸೂಚನೆ ನೀಡಿದೆ.

ಈ ವಿಡಿಯೋ ವೈರಲ್ ಆಗ್ತಿದ್ದಂತೆ ಇನ್ನಷ್ಟು ಯುವಕರು ರೈಲಿನಿಂದ ಕೆಳಗಿಳಿದು ಕಿಕಿ ಚಾಲೆಂಜ್ ಮಾಡುವ ಸಾಧ್ಯತೆ ಹೆಚ್ಚಿದೆ. ಇದನ್ನು ನಿಯಂತ್ರಿಸಲು ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿದೆ. ದೆಹಲಿ ಹಾಗೂ ಮುಂಬೈ ಪೊಲೀಸರು ಕಿಕಿ ಡಾನ್ಸ್ ಬಗ್ಗೆ ಈಗಾಗಲೇ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. ಆಪತ್ತಿಗೆ ಕಾರಣವಾಗುವ ಈ ಚಾಲೆಂಜ್ ಮಾಡದಂತೆ ಮನವಿ ಮಾಡಿವೆ. ಪೊಲೀಸ್ ಎಚ್ಚರಿಕೆಗೆ ಯಾರೂ ಕಿವಿಕೊಟ್ಟಂತೆ ಕಾಣ್ತಿಲ್ಲ. ಕಿಕಿ ಚಾಲೆಂಜ್ ಮಾಡುವವರ ಸಂಖ್ಯೆ ಹೆಚ್ಚಾಗ್ತಲೇ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...