alex Certify
ಕನ್ನಡ ದುನಿಯಾ       Mobile App
       

Kannada Duniya

”ಮೂತ್ರ ಪಿಂಡದ ಮೇಲೆ ಧರ್ಮದ ಸ್ಟ್ಯಾಂಪ್ ಇರೋದಿಲ್ಲ”

sushma

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಒಂದು ಕಿಡ್ನಿ ಫೇಲ್ ಆಗಿದ್ದು, ಕಸಿ ಮಾಡುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಷಯ ಜನತೆಗೆ ತಿಳಿಯುತ್ತಿದ್ದಂತೆ ಸಾಕಷ್ಟು ಮಂದಿ ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಮುಂದೆ ಬಂದಿದ್ದಾರೆ. ವಿದೇಶಿಯರಿಂದ ಹಿಡಿದು ದೇಶದ ಮೂಲೆ ಮೂಲೆಯಲ್ಲಿರುವ ಜನರು ಸುಷ್ಮಾಗೆ ಕಿಡ್ನಿ ನೀಡುವುದಾಗಿ ಹೇಳಿದ್ದಾರೆ.

ಜನರ ಪ್ರೀತಿಗೆ ಸುಷ್ಮಾ ಈಗಾಗಲೇ  ಟ್ವೀಟರ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಈ ನಡುವೆ ಉತ್ತರ ಪ್ರದೇಶದ ಬಿಎಸ್ಪಿ ಬೆಂಬಲಿಗ ಮುಜಿದ್ ಅನ್ಸಾರಿ ಎಂಬುವವರು ಕಿಡ್ನಿ ನೀಡಲು ಆಸಕ್ತರಾಗಿರುವುದಾಗಿ ತಿಳಿಸಿದ್ದಾರೆ. ತಾನೊಬ್ಬ ಮುಸ್ಲಿಂ ಎಂದೂ ಅವರು ಹೇಳಿಕೊಂಡಿದ್ದಾರೆ.

ಸುಷ್ಮಾ ಸ್ವರಾಜ್, ನಾನೊಬ್ಬ ಬಿಎಸ್ಪಿ ಬೆಂಬಲಿಗ. ಜೊತೆಗೆ ಮುಸ್ಲಿಂ. ನಿಮಗೆ ಕಿಡ್ನಿ ನೀಡಲು ಆಸಕ್ತನಾಗಿದ್ದೇನೆ. ನೀವು ನನಗೆ ಅಮ್ಮನ ಸಮಾನ. ಅಲ್ಲಾ ನಿಮಗೆ ಆರೋಗ್ಯ ನೀಡಲಿ ಎಂದು ಅನ್ಸಾರಿ ಟ್ವಿಟ್ ಮಾಡಿದ್ದಾರೆ. ಇದಲ್ಲದೆ ಶಾಹಿಕ್ ಮುನ್ನಾ ಮತ್ತು ಜಾನ್ ಶಾ ಎಂಬ ಇಬ್ಬರು ಕಿಡ್ನಿ ನೀಡಲು ಮುಂದೆ ಬಂದಿದ್ದಾರೆ.

ಇವರೆಲ್ಲರ ಪ್ರೀತಿ, ಅಭಿಮಾನ ನೋಡಿದ ಸುಷ್ಮಾ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಸಹೋದರರೇ ನಿಮಗೆ ತುಂಬಾ ತುಂಬಾ ಧನ್ಯವಾದ. ಮೂತ್ರಪಿಂಡದ ಮೇಲೆ ಯಾವುದೇ ಧರ್ಮದ  ಸ್ಟ್ಯಾಂಪ್ ಇರುವುದಿಲ್ಲ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...