alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯನ್ನ ಕಿಡ್ನಾಪ್ ಮಾಡಿದವರು ತಗ್ಲಾಕೊಂಡಿದ್ದು ಹೇಗೆ ಗೊತ್ತಾ…?

ಮೊಹಾಲಿಯಲ್ಲಿ ಯುವತಿಯನ್ನ ಅಪಹರಿಸಿದ ಇಬ್ಬರು ಯುವಕರು ವಿಚಿತ್ರವಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಯುವತಿಯನ್ನ ಅಪಹರಿಸಿದ ಅಪಹರಣಕಾರರು ಮಾರುತಿ ಕಾರಿನಲ್ಲಿ ಆಕೆಯನ್ನ ಗುಪ್ತ ಸ್ಥಳವೊಂದಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಯುವತಿಯ ಬಾಯಿಗೆ ಬಟ್ಟೆ ತುರುಕಿ ಆಕೆಯ ಕೈಗಳನ್ನು ಕಟ್ಟಿ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲದಂತೆ ಮಾಡಿಬಿಟ್ಟಿದ್ದರು. ಆದರೂ ಅಪಹರಣಕಾರರು ದುರಾದೃಷ್ಟದ ಆಟದಿಂದಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕಾರಿನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ಕಾರು ಮಾರ್ಗ ಮಧ್ಯೆಯೇ ನಿಂತುಬಿಟ್ಟಿದೆ. ಈ ವೇಳೆ ಯುವತಿ ಕಟ್ಟಿದ ಕೈಗಳಿಂದಲೇ ಕಾರಿನ ಗಾಜನ್ನು ಬಡಿದು ಸಾರ್ವಜನಿಕರಿಗೆ ತಾನು ಅಪಾಯದಲ್ಲಿರುವ ಸೂಚನೆ ಕೊಟ್ಟಿದ್ದಾಳೆ. ಆನಂತರದಲ್ಲಿ ಸಹಾಯಕ್ಕೆ ಬಂದ ಸಾರ್ವಜನಿಕರು ಯುವತಿಯನ್ನ ಅಪಹರಣಕಾರರಿಂದ ರಕ್ಷಿಸಿದ್ದಾರೆ. ಅಷ್ಟೇ ಅಲ್ಲ ಅಪಹರಣಕಾರರ ಪೈಕಿ ಒಬ್ಬನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ನಡೆಸಿದ ಪೊಲೀಸರಿಗೆ, ಬಂಧಿತ ವ್ಯಕ್ತಿ ಯುವತಿಯನ್ನು ಮದುವೆಯಾಗೋದಕ್ಕೆ ಪೀಡಿಸುತ್ತಿದ್ದ. ಅದಕ್ಕೆ ಯುವತಿ ಒಪ್ಪದ ಹಿನ್ನಲೆಯಲ್ಲಿ ಸ್ನೇಹಿತನೊಂದಿಗೆ ಸೇರಿ ಆಕೆಯನ್ನ ಅಪಹರಣ ಮಾಡೋದಕ್ಕೆ ಪ್ರಯತ್ನಿಸಿದ ಅನ್ನೋ ವಿಚಾರ ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...