alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷದಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆ ಕಥೆ ಕೇಳಿ ದಂಗಾದ ಪೊಲೀಸ್

ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಮಗುವಿನೊಂದಿಗೆ ವಾಪಸ್ ಆಗಿದ್ದಾಳೆ. ಛತ್ತೀಸ್ಗಡದ ರಾಮಾನುಜ ನಗರ್ ನಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತೆ ನಾಲ್ಕು ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದಳು. ಪೊಲೀಸ್ ಹಾಗೂ ಸಂಬಂಧಿಕರು ಹಗಲು ರಾತ್ರಿಯೆನ್ನದೆ ಬಾಲಕಿಗಾಗಿ ಹುಡುಕಾಟ ನಡೆಸಿದ್ದರು.

ಮಾಹಿತಿ ಪ್ರಕಾರ, ಕೊರಿಯ ಜಿಲ್ಲೆಯ ರಾಜಾರಾಮ್ ಪೀಡಿತೆಯನ್ನು ಅಪಹರಿಸಿದ್ದ. ಬಾಲಕಿಯನ್ನು ನಂಬಿಸಿ ಮಧ್ಯಪ್ರದೇಶದ ಶಿವಪುರ ಜಿಲ್ಲೆಗೆ ಕರೆದೊಯ್ದಿದ್ದ. ನಂತ್ರ ಅಪ್ರಾಪ್ತೆಯನ್ನು 62 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಕುಮೇರ್ ಎಂಬಾತ ಬಾಲಕಿಯನ್ನು ಗೆಸ್ಟ್ ಹೌಸ್ ನಲ್ಲಿ ಇಟ್ಟಿದ್ದನಂತೆ. ಆತ ಹಾಗೂ ಆತನ ಸ್ನೇಹಿತರು ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದರಂತೆ. ಹಾಡು, ನೃತ್ಯ ಮಾಡುವಂತೆ ಹೇಳುತ್ತಿದ್ದರಂತೆ. ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದರಂತೆ.

ಅಕ್ಟೋಬರ್ 2014ರಲ್ಲಿ ಬಾಲಕಿಯನ್ನು ಅಪಹರಿಸಲಾಗಿತ್ತು. ಈಗ ಮಗುವಿನೊಂದಿಗೆ ಬಂದ ಬಾಲಕಿ ತನ್ನೆಲ್ಲ ಕಥೆಯನ್ನು ಪೊಲೀಸ್ ಮುಂದೆ ಹೇಳಿದ್ದಾಳೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...