alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಗಿದೆ ಈ ಫೋಟೋ…!

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಭಾರತ ಪ್ರವಾಸದಲ್ಲಿದ್ದಾರೆ. ಪತ್ನಿ ಮತ್ತು ಮಕ್ಕಳೊಂದಿಗೆ ಜಸ್ಟಿನ್, ತಾಜ್ ಮಹಲ್ ಹಾಗೂ ಗುಜರಾತ್ ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿರೋ ಫೋಟೋಗಳು ಸಹ ವೈರಲ್ ಆಗಿವೆ. ಆದ್ರೆ ಮುಂಬೈನಲ್ಲಿ ನಡೆದ ಭೋಜನಕೂಟವೊಂದರ ಫೋಟೋ ಈಗ ವಿವಾದಕ್ಕೆ ಕಾರಣವಾಗಿದೆ.

ಈ ಭೋಜನಕೂಟದಲ್ಲಿ ಕೆನಡಾ ಪ್ರಧಾನಿ ಜೊತೆಗೆ ಖಾಲಿಸ್ತಾನಿ ಉಗ್ರನೊಬ್ಬ ಭಾಗಿಯಾಗಿದ್ದನಂತೆ. ಖಾಲಿಸ್ತಾನಿ ಭಯೋತ್ಪಾದಕ ಜಸ್ಪಾಲ್ ಅತ್ವಾಲ್ ಜೊತೆಗೆ ಕೆನಡಾ ಪ್ರಧಾನಿಯ ಪತ್ನಿ ಸೋಫಿ ಟ್ರುಡ್ಯೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೆನಡಾ ಸಚಿವ ಅಮರ್ ಜೀತ್ ಸೋಹಿ ಜೊತೆಗೂ ಜಸ್ಪಾಲ್ ಕಾಣಿಸಿಕೊಂಡಿದ್ದಾನೆ.

ಇಂದು ದೆಹಲಿಯಲ್ಲಿ ನಡೆಯಲಿರೋ ಭೋಜನ ಕೂಟಕ್ಕೂ ಜಸ್ಪಾಲ್ ಗೆ ಆಹ್ವಾನವಿತ್ತಂತೆ. ಕೆನಡಾ ರಾಯಭಾರ ಕಚೇರಿ ವತಿಯಿಂದ ಪ್ರಧಾನಿ ಜಸ್ಟಿನ್ ಮತ್ತು ಕುಟುಂಬದವರಿಗೆ ಭೋಜನ ಏರ್ಪಡಿಸಲಾಗಿದೆ. ಆದ್ರೀಗ ಜಸ್ಪಾಲ್ ಗೆ ನೀಡಿದ್ದ ಆಹ್ವಾನವನ್ನು ರದ್ದುಪಡಿಸಲಾಗಿದೆ.

ಜಸ್ಪಾಲ್ ಅತ್ವಾಲ್, ನಿಷೇಧಿತ ಉಗ್ರ ಸಂಘಟನೆ ಸಿಖ್ ಯೂತ್ ಫೆಡರೇಶನ್ ಸದಸ್ಯ. ಮಾಜಿ ಸಚಿವ ಮಲ್ಕೈತ್ ಸಿಂಗ್ ಸಿಧು ಹತ್ಯೆ ಪ್ರಕರಣದ ಅಪರಾಧಿ. ಆದ್ರೂ ಆತನ ಜೊತೆ ಕೆನಡಾ ಪ್ರಧಾನಿ ಭೋಜನ ಮಾಡಿರೋದು ಟೀಕೆಗೆ ಗುರಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...