alex Certify
ಕನ್ನಡ ದುನಿಯಾ       Mobile App
       

Kannada Duniya

ನರ್ಸಿಂಗ್ ವಿದ್ಯಾರ್ಥಿನಿಗೆ ಟಾಯ್ಲೆಟ್ ಲೋಶನ್ ಕುಡಿಸಿದ ಸೀನಿಯರ್ಸ್

ragging-gulbarga 455ರ್ಯಾಗಿಂಗ್ ಪಿಡುಗನ್ನು ತಡೆಗಟ್ಟಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅದಕ್ಕಿನ್ನೂ ಕಡಿವಾಣ ಬಿದ್ದಿಲ್ಲ. ಹಿರಿಯ ವಿದ್ಯಾರ್ಥಿಗಳು ಹೊಸದಾಗಿ ಕಾಲೇಜಿಗೆ ಸೇರಿಕೊಂಡವರನ್ನು ರ್ಯಾಗಿಂಗ್ ಹೆಸರಿನಲ್ಲಿ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದು, ಅಂತಹ ಒಂದು ಪ್ರಕರಣದ ವರದಿ ಇಲ್ಲಿದೆ.

ಕೇರಳದ ಎಡಪ್ಪಾಲ್ ನ ವಿದ್ಯಾರ್ಥಿನಿಯೊಬ್ಬಳು ಕರ್ನಾಟಕದ ಕಲಬುರ್ಗಿಯಲ್ಲಿರುವ ನರ್ಸಿಂಗ್ ಕಾಲೇಜಿಗೆ ಸೇರಿಕೊಂಡಿದ್ದಳು. ಆಕೆಗೆ ಇದೇ ಕಾಲೇಜಿನ ಹಿರಿಯ ಮಲೆಯಾಳಿ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿರುವುದಲ್ಲದೇ ಟಾಯ್ಲೆಟ್ ಸ್ವಚ್ಚಗೊಳಿಸಲು ಬಳಸುವ ಲೋಶನ್ ಅನ್ನು ಬಲವಂತವಾಗಿ ಕುಡಿಸಿದ್ದಾರೆ.

ಇದರಿಂದಾಗಿ ವಿದ್ಯಾರ್ಥಿನಿಯ ಅನ್ನ ನಾಳ ಸುಟ್ಟು ಹೋಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಆಕೆಯೀಗ ಕೋಝಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ದ ತಾವು ದೂರು ನೀಡಿದ್ದರೂ ಕಲಬುರ್ಗಿ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿರುವ ವಿದ್ಯಾರ್ಥಿನಿಯ ಪೋಷಕರು, ಪೊಲೀಸರು ಕಾಲೇಜು ಆಡಳಿತ ಮಂಡಳಿ ಪರವಾಗಿದ್ದಾರೆಂದು ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...