alex Certify
ಕನ್ನಡ ದುನಿಯಾ       Mobile App
       

Kannada Duniya

ದಕ್ಷಿಣ ಅಫ್ರಿಕಾದಲ್ಲಿ ಕೇರಳ ಇಂಜಿನಿಯರ್ ಹತ್ಯೆ

sasi-southafrica 7899ಕಾರ್ಯ ನಿಮಿತ್ತ ದಕ್ಷಿಣ ಅಫ್ರಿಕಾಕ್ಕೆ ತೆರಳಿದ್ದ ಕೇರಳದ ಇಂಜಿನಿಯರ್ ಒಬ್ಬರನ್ನು ದರೋಡೆಕೋರರ ಗುಂಪು ಶನಿವಾರದಂದು ಅವರು ವಾಸಿಸುತ್ತಿದ್ದ ಮನೆಯಲ್ಲಿಯೇ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ 64 ವರ್ಷದ ಎನ್. ಶಶಿ ಹತ್ಯೆಗೀಡಾದವರಾಗಿದ್ದು, ಇವರು ಕೊಲ್ಲಂ ಜಿಲ್ಲೆಯ ತೋಲಿಕ್ಕೋಡ್ ನ ಪಾರ್ವತಿ ಕಾಟೇಜ್ ನಿವಾಸಿಯಾಗಿದ್ದರು.

ರಾಷ್ಟ್ರೀಯ ಡ್ಯಾಂ ಸುರಕ್ಷಾ ಪ್ರಾಧಿಕಾರದ ಸದಸ್ಯರೂ ಆಗಿದ್ದ ಶಶಿ, ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುತ್ತಿರುವ ಕೊಚ್ಚಿಯಲ್ಲಿನ ಸಂಸ್ಥೆಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಈ ಸಂಬಂಧ ಅವರು ದಕ್ಷಿಣ ಅಫ್ರಿಕಾಕ್ಕೆ ತೆರಳಿದ್ದರೆಂದು ಹೇಳಲಾಗಿದ್ದು, ದರೋಡೆಕೋರರಿಂದ ಹತ್ಯೆಯಾಗಿದ್ದಾರೆ. ಅವರ ಪಾರ್ಥಿವ ಶರೀರ ಶುಕ್ರವಾರದಂದು ಕೇರಳಕ್ಕೆ ಆಗಮಿಸುವ ನಿರೀಕ್ಷೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...