alex Certify
ಕನ್ನಡ ದುನಿಯಾ       Mobile App
       

Kannada Duniya

ಸೆರೆಯಾಯ್ತು ಅಪಾಯದಿಂದ ಪಾರಾದ ಅಪರೂಪದ ದೃಶ್ಯ

ತಿರುವನಂತಪುರಂ: ಮೃಗಾಲಯದಲ್ಲಿ ವನ್ಯಜೀವಿಗಳನ್ನು ವೀಕ್ಷಿಸುತ್ತಿದ್ದ ಪ್ರವಾಸಿಗರು ಒಮ್ಮೆಲೆ ಜೋರಾಗಿ ಕಿರುಚಾಡಿದ್ದಾರೆ. ಪ್ರವಾಸಿಗರ ಕಿರುಚಾಟ ಕೇಳಿ ಬಂದ ಮೃಗಾಲಯದ ಸಿಬ್ಬಂದಿ, ಸಿಂಹದ ಬೋನುಗಳ ಬಳಿ ಇದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಿದ್ದಾರೆ.

ತಿರುವನಂತಪುರಂ ಮೃಗಾಲಯದಲ್ಲಿ ಪಾಲಕ್ಕಾಡ್ ನಿವಾಸಿ ಮುರುಗನ್ ಈ ವಿಡಿಯೋ ಸೆರೆ ಹಿಡಿದಿದ್ದಾರೆ. ಸಿಂಹಗಳಿದ್ದ ಆವರಣದಲ್ಲಿ ವ್ಯಕ್ತಿಯೊಬ್ಬ ಅಂಬೆಗಾಲಿಟ್ಟುಕೊಂಡು ಸಾಗಿದ್ದಾನೆ. ಆತನನ್ನು ಗಮನಿಸಿದ ಪ್ರವಾಸಿಗರು ಕೂಗಿದ್ದು, ಕೂಡಲೇ ಧಾವಿಸಿ ಬಂದ ಮೃಗಾಲಯ ಸಿಬ್ಬಂದಿ ರಕ್ಷಿಸಿದ್ದಾರೆ.

ಮೊದಲಿಗೆ ಸಿಂಹಗಳ ಆವರಣಕ್ಕೆ ವ್ಯಕ್ತಿ ಹಾರಿದ್ದಾನೆ. ಆಕಸ್ಮಾತ್ ಸಿಂಹಗಳು ಹತ್ತಿರದಲ್ಲಿದ್ದರೆ ಆತ ಬದುಕುಳಿಯುವುದು ಕಷ್ಟವಾಗಿತ್ತು. ಅದೃಷ್ಟವಶಾತ್ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾನೆ ಎಂದು ಮುರುಗನ್ ಹೇಳಿದ್ದಾರೆ. ಈ ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...