alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಮಹಿಳೆಯಿಂದ ತಕ್ಕ ಶಾಸ್ತಿ

558162-ganga-rape-us

ಕೇರಳದ ಕೊಚ್ಚಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ನೆರೆಮನೆಯಾತನ ನಾಲಿಗೆಯನ್ನೇ ಮಹಿಳೆಯೊಬ್ಬಳು ಕಚ್ಚಿಬಿಟ್ಟಿದ್ದಾಳೆ. 30 ವರ್ಷದ ವ್ಯಕ್ತಿಯೊಬ್ಬ ಅವಳ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದ, ಬಲವಂತವಾಗಿ ಚುಂಬಿಸಲು ಯತ್ನಿಸಿದ್ದ. ಆತನಿಂದ ತಪ್ಪಿಸಿಕೊಳ್ಳಲು ಮಹಿಳೆ ಅವನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ.

ಕಾಮುಕನ ವಿರುದ್ಧ ದೂರು ನೀಡಿರುವ ಮಹಿಳೆ, ಕಚ್ಚಿ ತುಂಡರಿಸಿದ ನಾಲಿಗೆಯ ಚೂರನ್ನು ಕೂಡ ಪೊಲೀಸರಿಗೆ ಒಪ್ಪಿಸಿದ್ದಾಳೆ. ಈ ಹಿಂದೆ ಕೂಡ ಆತನ ವಿರುದ್ಧ ಇಂಥದ್ದೇ ಕೇಸ್ ದಾಖಲಾಗಿದ್ದು, ಒಂದು ವಾರ ಆತ ನ್ಯಾಯಾಂಗ ಬಂಧನದಲ್ಲಿದ್ದ. ರಾತ್ರಿ ಮಹಿಳೆ ಮನೆಯಿಂದ ಹೊರಬಂದ ಸಮಯದಲ್ಲೇ ಕಾಮುಕ ಅಲ್ಲಿ ಪ್ರತ್ಯಕ್ಷನಾಗಿದ್ದ.

ಅವಳನ್ನು ಬರಸೆಳೆದು ಚುಂಬಿಸಲು ಮುಂದಾಗಿದ್ದಾನೆ, ಕೂಡಲೇ ಅಲರ್ಟ್ ಆದ ಮಹಿಳೆ ಅವನ ನಾಲಗೆಯನ್ನೇ ಕತ್ತರಿಸಿ ಹಾಕಿದ್ದಾಳೆ. ಈ ಘಟನೆಯ ನಂತರ ಆಸ್ಪತ್ರೆಗೆ ತೆರಳಿದ್ದ ಆತ ಬೈಕ್ ಅಪಘಾತದಲ್ಲಿ ನಾಲಗೆ ಕಟ್ ಆಗಿದೆ ಅಂತಾ ಸುಳ್ಳು ಹೇಳಿದ್ದ. ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 2 ಸೆಮೀನಷ್ಟು ಉದ್ದದ ನಾಲಿಗೆ ಕಟ್ ಆಗಿದ್ದು, ಮಾತನಾಡಲು ಕೊಂಚ ಕಷ್ಟವಾಗಬಹುದು ಅಂತಾ ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...