alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೋಲ್ ಗೆ ತುತ್ತಾದ ವಿದ್ಯಾರ್ಥಿನಿ ಬೆಂಬಲಕ್ಕೆ ಕೇಂದ್ರ ಸಚಿವ

ಕೊಚ್ಚಿ: ಕಾಲೇಜು ಮುಗಿದ ಬಳಿಕ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ 21 ವರ್ಷದ ಹುಡುಗಿಗೆ ಕೇಂದ್ರ ಸಚಿವ ಆಲ್ಫೋನ್ಸ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಹುಡುಗಿಯ ಕಥೆಯನ್ನು ಬಳಸಿ ಟ್ರೋಲ್‌ ಮಾಡುತ್ತಿರುವುದಕ್ಕೆ ಅಲ್ಫೋನ್ಸ್‌ ಗರಂ ಆಗಿದ್ದಾರೆ. ಇತ್ತೀಚೆಗೆ ಮಲಯಾಳ ಪತ್ರಿಕೆ ಮಾತೃಭೂಮಿಯಲ್ಲಿ ಎರ್ನಾಕುಲಂನಲ್ಲಿ ಬಿಎಸ್‌ಸಿ ಓದಿಕೊಂಡು, ಕಾಲೇಜು ಮುಗಿದ ಬಳಿಕ ಮೀನು ಮಾರಾಟದಲ್ಲಿ ತೊಡಗುವ ಹನನ್‌ ಕುರಿತು ಸುದ್ದಿ ಪ್ರಕಟವಾಗಿದೆ. ಹನನ್‌ ಕಷ್ಟದ ಜೀವನದ ಕುರಿತು ಬರೆದ ಸುದ್ದಿ, ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಅನೇಕ ಮಂದಿ ಮೆಚ್ಚಿಕೊಂಡಿದ್ದಾರೆ. ಹನನ್‌ಗೆ ಸಹಾಯ ಮಾಡಲೂ ಮುಂದೆ ಬಂದಿದ್ದಾರೆ.

ಆದರೆ ಕೆಲ ಸಂಘಟನೆಗಳು ಹನನ್‌ ಕುರಿತು ಬರೆದ ಸುದ್ದಿ ಕಾಲ್ಪನಿಕ ಎಂದಿದ್ದು, ಹನನ್‌ ಳನ್ನು ಟ್ರೋಲ್‌ ಗೆ ಬಳಸಿಕೊಂಡಿದ್ದಾರೆ. ಇಷ್ಟಾಗ್ಯೂ ಕಾಲೇಜು ಪ್ರಾಂಶುಪಾಲರು ಹಾಗೂ ಸ್ಥಳೀಯರು ಹನನ್‌ ಸಹಾಯಕ್ಕೆ ಬಂದಿದ್ದಾರೆ. ಈ ವಿಚಾರವೂ ಪತ್ರಿಕೆಯಲ್ಲಿ ಪ್ರಕಟಗೊಂಡು, ಹನನ್‌ನ ಕಥೆ ಅಸಲಿ ಎಂದು ಪ್ರಕಟಿಸಿವೆ.

ಆಕೆಯನ್ನು ಟ್ರೋಲ್‌ ಮಾಡಿದ್ದಕ್ಕಾಗಿ ತಮ್ಮ ಫೇಸ್‌ ಬುಕ್‌ ಪೇಜ್‌ ನಲ್ಲಿ ಕೇರಳ ಶಾರ್ಕ್‌ ಗಳೇ ಹನನ್‌ ಮೇಲೆ ದಾಳಿ ನಿಲ್ಲಿಸಿ. ಇಂತಹ ಘಟನೆಗಳಿಗೆ ನಾಚಿಕೆಯಾಗಬೇಕು ಎಂದು ಸಚಿವ ಅಲ್ಫೋನ್ಸ್‌ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರೂ, ಕಷ್ಟಗಳನ್ನು ಎದುರಿಸಿ ಪ್ರಧಾನ ಮಂತ್ರಿ ಆಗಿದ್ದಾರೆ ಎಂದು ಹೇಳುವ ಮೂಲಕ, ಹನನ್‌ ಬೆಂಬಲಕ್ಕೆ ನಿಂತಿದ್ದಾರೆ.

ಏತನ್ಮಧ್ಯೆ ನನಗೆ ಯಾವುದೇ ಸಹಾಯವೂ ಅಗತ್ಯವಿಲ್ಲ. ದಿನ ನಿತ್ಯ ಹೊಟ್ಟೆ ತುಂಬಲು ದುಡಿಯುತ್ತಿದ್ದೇವೆ. ನಮ್ಮನ್ನು ನಮ್ಮಷ್ಟಕ್ಕೇ ಬಿಟ್ಟರೆ ಅಷ್ಟೇ ಸಾಕು ಎಂದು ಹನನ್‌ ಬೇಡಿಕೊಂಡಿದ್ದಾಳೆ. ಹುಡುಗಿಯ ವಿಚಾರವನ್ನು ತಿಳಿದ ನಿರ್ಮಾಪಕ ಅರುಣ್‌ ಗೋಪಿ, ತನ್ನ ಮುಂದಿನ ಚಿತ್ರದಲ್ಲಿ ನಟಿಸುವಂತೆಯೂ ಆಕೆಗೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...