alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಜನರಿಗೆ ನೆರವಾಗಲು ಈ ವಿಮಾನ ಕಂಪನಿ ನೀಡ್ತಿದೆ ಉಚಿತ ಟಿಕೆಟ್

ಕೇರಳ ಶತಮಾನದ ಅತಿ ದೊಡ್ಡ ಪ್ರವಾಹಕ್ಕೊಳಗಾಗಿದೆ. ನಿರಾಶ್ರಿತರ ನೆರವಿಗೆ ಇಡೀ ದೇಶವೇ ಒಂದಾಗಿದೆ. ದೇಶದ ಮೂಲೆ ಮೂಲೆಗಳಿಂದ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಗ್ತಿದೆ. ನಿರಾಶ್ರಿತರಿಗೆ ನೆರವಾಗಲು ಈಗ ವಿಸ್ತಾರ ಏರ್ಲೈನ್ಸ್ ಕೂಡ ಮುಂದೆ ಬಂದಿದೆ.

ಕೇರಳ ಜನರಿಗೆ ನೆರವಾಗಲು ಕೇರಳಕ್ಕೆ ತೆರಳುವ ಜನರಿಗೆ ಉಚಿತ ಪ್ರಯಾಣಕ್ಕೆ ವಿಸ್ತಾರ ಏರ್ ಲೈನ್ಸ್ ಅವಕಾಶ ಮಾಡಿಕೊಟ್ಟಿದೆ. ಕೇರಳದಲ್ಲಿ ನೆರವಿನ ಕಾರ್ಯ ಮುಗಿದ ನಂತ್ರ ವಾಪಸ್ ಬರುವವರಿಗೂ ಕೂಡ ಉಚಿತ ವಿಮಾನ ಟಿಕೆಟ್ ನೀಡ್ತಿದೆ.

ವಿಸ್ತಾರ ವಿಮಾನ ಸಂಸ್ಥೆ ಪ್ರಕಾರ, ವೈದ್ಯರು, ದಾದಿಯರು, ವಿಕೋಪ ನಿರ್ವಹಣೆ ತಜ್ಞರು, ತರಬೇತಿ ಪಡೆದ ಸ್ವಯಂಸೇವಕರು, ಗುರುತಿಸಲ್ಪಟ್ಟ ಸಂಸ್ಥೆಗಳು ಮತ್ತು ಪರಿಹಾರ ಸಂಸ್ಥೆಗಳ ಪ್ರತಿನಿಧಿಗಳು ಉಚಿತವಾಗಿ ಕೇರಳಕ್ಕೆ ತೆರಳಬಹುದಾಗಿದೆ. ದೆಹಲಿ, ಚೆನ್ನೈನಿಂದ ತಿರುವನಂತಪುರಂಗೆ ತೆರಳಲು ಉಚಿತ ಟಿಕೆಟ್ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ. [email protected] ನಲ್ಲಿ ವಿನಂತಿ ಮೇಲ್ ಕಳುಹಿಸಿ ಟಿಕೆಟ್ ಪಡೆಯಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...