alex Certify
ಕನ್ನಡ ದುನಿಯಾ       Mobile App
       

Kannada Duniya

ಠಾಣೆಯಲ್ಲೇ ತೃತೀಯ ಲಿಂಗಿಯ ಬಟ್ಟೆ ಬಿಚ್ಚಿಸಿದ ಖಾಕಿಗಳು

ಕೇರಳದ ಅಲಪ್ಪುಝಾ ಎಂಬಲ್ಲಿ ಪೊಲೀಸ್ ಠಾಣೆಯಲ್ಲೇ ತೃತೀಯ ಲಿಂಗಿಯನ್ನು ವಿವಸ್ತ್ರಗೊಳಿಸಿ ಖಾಕಿಗಳು ಅಟ್ಟಹಾಸ ಮೆರೆದಿದ್ದಾರೆ. ತೃತೀಯ ಲಿಂಗಿಯ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಕಳೆದ ಗುರುವಾರ ಪೆಟ್ರೋಲಿಂಗ್ ಪೊಲೀಸರು ತೃತೀಯ ಲಿಂಗಿಯನ್ನು ಠಾಣೆಗೆ ಕರೆತಂದಿದ್ದಾರಂತೆ. ಸೆಲ್ ನಲ್ಲೇ ಆತ್ಮಹತ್ಯೆ ಮಾಡಿಕೊಳ್ಳಬಹುದು ಅನ್ನೋ ಅನುಮಾನವೂ ಪೊಲೀಸರಿಗಿತ್ತು. ನಂತರ ಬಟ್ಟೆ ಬಿಚ್ಚಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ವಿಡಿಯೋ ಸಹ ರೆಕಾರ್ಡ್ ಮಾಡಿಕೊಂಡು ಅದನ್ನು ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ತೃತೀಯ ಲಿಂಗಿ ಮದ್ಯ ಸೇವಿಸಿ ಗದ್ದಲ ಎಬ್ಬಿಸಿದ್ರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ತೃತೀಯ ಲಿಂಗಿಯ ಮೇಲೆ ಅಮಾನುಷ ಕೃತ್ಯ ನಡೆಸಿದ ಪೊಲೀಸರ ವಿರುದ್ಧ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...