alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಲಾರ್ ಹಗರಣ: ಸರಿತಾ ಸೇರಿ ಇಬ್ಬರಿಗೆ ಶಿಕ್ಷೆ

saritha-n

ಎರ್ನಾಕುಲಂ: ದೇಶದ ಗಮನ ಸೆಳೆದಿದ್ದ, ಕೇರಳ ಸೋಲಾರ್ ಹಗರಣದ ಅಪರಾಧಿಗಳಿಗೆ ಎರ್ನಾಕುಲಂ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಸರಿತಾ ನಾಯರ್ ಹಾಗೂ ಬಿಜು ರಾಧಾಕೃಷ್ಣನ್ ಶಿಕ್ಷೆಗೆ ಒಳಗಾದವರು. 3 ವರ್ಷಗಳ ಹಿಂದೆ ಹಗರಣ ಬೆಳಕಿಗೆ ಬಂದಿದ್ದು, ಆಗ ಮುಖ್ಯಮಂತ್ರಿಯಾಗಿ ಒಮ್ಮನ್ ಚಾಂಡಿ ಹೆಸರೂ ಕೇಳಿಬಂದಿತ್ತು. 2011 ರಲ್ಲಿ ಸೋಲಾರ್ ಕಂಪನಿ ಆರಂಭಿಸಿದ್ದ ಸರಿತಾ ನಾಯರ್ ಉದ್ಯಮಿಗಳಿಂದ ಹಣ ಹೂಡಿಕೆ ಮಾಡಿಕೊಂಡು ವಂಚಿಸಿದ್ದರು.

ಸಿ.ಎಂ. ಹೆಸರಿನಲ್ಲಿ ವ್ಯವಹಾರ ನಡೆಸಿದ್ದಲ್ಲದೇ, ಕೆಲವು ಜನಪ್ರತಿನಿಧಿಗಳ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...