alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದದ ನಂತ್ರ ಬದಲಾಯ್ತು ಶಾಲೆಯ ಸಮವಸ್ತ್ರ

kerala-school_070617-084615

ಕೇರಳದ ಸೆಂಟ್ ಅಲ್ಫೋನ್ಸಾ ಪಬ್ಲಿಕ್ ಸ್ಕೂಲ್ ವಿವಾದದಲ್ಲಿ ಸಿಲುಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸ್ಕೂಲ್ ನ ಸಮವಸ್ತ್ರದ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಮೂವರು ವಿದ್ಯಾರ್ಥಿನಿಯರಿದ್ದು ಅವರು ಶಾಲೆಯ ಸಮವಸ್ತ್ರ ಧರಿಸಿದ್ದಾರೆ. ವಿವಾದ ಹುಟ್ಟಿಕೊಂಡಿರೋದು ಹುಡುಗಿಯರ ಬಗ್ಗೆ ಅಲ್ಲ, ಸಮವಸ್ತ್ರದ ವಿನ್ಯಾಸದ ಬಗ್ಗೆ.

ಹುಡುಗಿಯರ ಸ್ತನದ ಆಕಾರವನ್ನು ಸ್ಪಷ್ಟವಾಗಿ ತೋರಿಸುವ ರೀತಿಯಲ್ಲಿ ಸಮವಸ್ತ್ರದ ವಿನ್ಯಾಸ ಮಾಡಲಾಗಿದೆ. ಸಾರ್ವಜನಿಕರು ಇದು ಅಶ್ಲೀಲ ವಿನ್ಯಾಸವೆಂದು ದೂರಿದ್ದಾರೆ. ಶಾಲೆಯ ಸಮವಸ್ತ್ರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೊಂದು ವಲ್ಗರ್ ವಿನ್ಯಾಸವೆಂದು ಆರೋಪ ಮಾಡಿದ್ದಾರೆ.

ಆದ್ರೆ ಶಾಲಾ ಆಡಳಿತ ಮಂಡಳಿ ಇದನ್ನು ತಳ್ಳಿಹಾಕಿದೆ. ಫೋಟೋಶಾಪ್ ಸಹಾಯದಿಂದ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಮಂಡಳಿ ದೂರಿದೆ. ಇನ್ನೊಂದೆಡೆ ಶಾಲೆ ವಿರುದ್ಧ ವ್ಯಕ್ತಿಯೊಬ್ಬರು ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದ ಶಾಲೆಯ ಸಮವಸ್ತ್ರದಲ್ಲಿ ಬದಲಾವಣೆ ತರಲು ಆಡಳಿತ ಮಂಡಳಿ ಮುಂದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...