alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನೊಂದಿಗೆ ಮಿಂಚಿನ ವೇಗದಲ್ಲಿ ಸೇತುವೆ ದಾಟಿದ ರಕ್ಷಣಾ ಕಾರ್ಯಕರ್ತೆ

ಕೇರಳದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ  ಭೂ ಕುಸಿತವೂ ಸಂಭವಿಸಿದೆ. ಮಳೆ ನೀರಿನ ರಭಸಕ್ಕೆ ರಸ್ತೆಗಳು ಕೊಚ್ಚಿ ಹೋಗಿರುವ ಪರಿಣಾಮ ಹಲವು ಭಾಗಗಳಲ್ಲಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ.

ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ಹೀಗಾಗಿ ಗೇಟುಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ಇದರ ಪರಿಣಾಮ ನದಿ ಪಾತ್ರದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು ಇವರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಮಳೆಯಿಂದಾಗಿ ಈವರೆಗೆ 29 ಮಂದಿ ಸಾವನ್ನಪ್ಪಿದ್ದು, 50,000 ಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿದವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗುತ್ತಿದ್ದು, ರಕ್ಷಣಾ ಕಾರ್ಯಕರ್ತೆಯೊಬ್ಬರು ಪುಟ್ಟ ಮಗುವನ್ನು ಎತ್ತಿಕೊಂಡು ಸೇತುವೆ ದಾಟುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಕ್ಷಣಾ ಕಾರ್ಯಕರ್ತೆ ಮಗುವನ್ನು ಎತ್ತಿಕೊಂಡು ಸೇತುವೆಯನ್ನು ವೇಗವಾಗಿ ಓಡುತ್ತಾ ದಾಟುತ್ತಿದ್ದು ಅವರುಗಳು ಸುರಕ್ಷಿತ ಸ್ಥಳಕ್ಕೆ ತಲುಪಿದ ಕೆಲವೇ ಕ್ಷಣಗಳಲ್ಲಿ ಸೇತುವೆ ನೀರಿನಿಂದ ಆವೃತವಾಗಿದೆ. ಕೇರಳದ ನ್ಯೂಸ್ 18 ತಂಡದ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ദുരന്തമുഖത്തു നിന്നും ജീവിതത്തെ നെഞ്ചോട് ചേർത്ത എല്ലാ രക്ഷാപ്രവർത്തകർക്കുമായി

കേരളം നമിക്കുന്നു, ഈ കരുതലിനെ…. ദുരന്തമുഖത്തു നിന്നും ജീവിതത്തെ നെഞ്ചോട് ചേർത്ത എല്ലാ രക്ഷാപ്രവർത്തകർക്കുമായി..

Posted by News18 Kerala on Friday, August 10, 2018

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...