alex Certify
ಕನ್ನಡ ದುನಿಯಾ       Mobile App
       

Kannada Duniya

ಆತಂಕಕ್ಕೆ ಕಾರಣವಾಗಿದೆ ವಾಟ್ಸಾಪ್ ಆಡಿಯೋ ಕ್ಲಿಪ್

ಐಸಿಸ್ ಹೆಸರಿನಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್ ಒಂದು ಕೇರಳದ ತ್ರಿಶೂರ್ ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ಆಗಮಿಸಬೇಕಿದ್ದ ಭಕ್ತರಲ್ಲಿ ಆತಂಕ ಮೂಡಿಸಿದೆ. ಕುಂಭ ಮೇಳದಲ್ಲಿ ಭಯೋತ್ಪಾದನಾ ದಾಳಿ ನಡೆಸುವುದಾಗಿ ಈ ಆಡಿಯೋ ಕ್ಲಿಪ್ ನಲ್ಲಿ ಬೆದರಿಕೆ ಹಾಕಲಾಗಿದೆ.

ಐಸಿಸ್ ಉಗ್ರರೆಂದು ಹೇಳಿಕೊಂಡು ಮಲಯಾಳಂ ಭಾಷೆಯಲ್ಲಿ ಯಾರೋ ಮಾತನಾಡಿದ್ದಾರೆ. ಈ ಆಡಿಯೋ ವಾಟ್ಸಾಪ್ ನಲ್ಲಿ ಹರಿದಾಡ್ತಾ ಇದೆ. ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆಡಿಯೋ ಕ್ಲಿಪ್ ನ ಮೂಲ ಯಾವುದು ಅನ್ನೋದನ್ನು ಪತ್ತೆ ಮಾಡ್ತಿದ್ದಾರೆ.

ಕೋಮು ಸಂಘರ್ಷ ಹುಟ್ಟಿಸಲೆಂದೇ ಈ ಆಡಿಯೋ ಕ್ಲಿಪ್ ವೈರಲ್ ಮಾಡಲಾಗಿದೆ ಅಂತಾ ಪೊಲೀಸರು ಶಂಕಿಸಿದ್ದಾರೆ. ಟೆಲಿಗ್ರಾಮ್ ಮೂಲಕವೂ ಈ ಆಡಿಯೋ ಕ್ಲಿಪ್ ಅನ್ನು ಕಳುಹಿಸಿದ್ದಾರೆ. ಆದ್ರೆ ಭಕ್ತರು ಆತಂಕಪಡುವ ಅಗತ್ಯವಿಲ್ಲ, ಕುಂಭ ಮೇಳಕ್ಕೆ ಸೂಕ್ತ ಭದ್ರತೆ ಏರ್ಪಡಿಸಲಾಗುವುದು ಅಂತಾ ಪೊಲೀಸರು ಭರವಸೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...