alex Certify
ಕನ್ನಡ ದುನಿಯಾ       Mobile App
       

Kannada Duniya

”ಜೀನ್ಸ್ ತೊಟ್ಟ ಮಹಿಳೆಯರನ್ನು ಸಮುದ್ರದಲ್ಲಿ ಮುಳುಗಿಸಬೇಕು”

kerala

ಮಹಿಳೆಯರ ಉಡುಪಿನ ಬಗ್ಗೆ ಸಾಕಷ್ಟು ಚರ್ಚೆಯಾಗ್ತಾನೇ ಇದೆ. ಅತ್ಯಾಚಾರದಂತಹ ಪ್ರಕರಣಗಳಿಗೆ ಮಹಿಳೆಯರ ತುಂಡುಡುಗೆಯೇ ಕಾರಣ ಅಂತಾ ಕೆಲವರು ವಾದಿಸಿದ್ರೆ, ಇನ್ನು ಕೆಲವರು ಸ್ತ್ರೀ ಸಮಾಜದ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಕೇರಳದಲ್ಲೊಬ್ಬ ಪಾದ್ರಿ ಮಹಿಳೆಯರ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೀನ್ಸ್ ತೊಡುವ ಮಹಿಳೆಯರ ಬಗ್ಗೆ ಈ ಪಾದ್ರಿ ಕಿಡಿಕಾರಿದ್ದಾರೆ. ಜೀನ್ಸ್ ತೊಟ್ಟ ಮಹಿಳೆಯರನ್ನೆಲ್ಲ ಸಮುದ್ರದಲ್ಲಿ ಮುಳುಗಿಸಿಬಿಡಬೇಕು ಎಂದಿದ್ದಾರೆ. ಮಹಿಳೆಯರು ಮೈಮಾಟ ಪ್ರದರ್ಶಿಸುವಂತಹ ಬಟ್ಟೆ ತೊಡುವುದರಿಂದ್ಲೇ ಅತ್ಯಾಚಾರ ಹೆಚ್ಚುತ್ತಿದೆ ಅಂತಾ ವಾದಿಸಿದ್ದಾರೆ.

ಜೀನ್ಸ್, ಶರ್ಟ್ ತೊಟ್ಟು, ಕೂದಲನ್ನು ನೀಟಾಗಿ ಬಾಚಿ ಜಡೆ ಹೆಣೆದುಕೊಳ್ಳದೇ ಹಾಗೇ ಬಿಟ್ಟುಕೊಂಡು, ಕೈಯ್ಯಲ್ಲೊಂದು ಮೊಬೈಲ್ ಹಿಡಿದು ಸ್ಟೈಲಾಗಿ ಬರುವ ಹೆಣ್ಣುಮಕ್ಕಳಿಗೆ ಚರ್ಚ್ ಪ್ರವೇಶಿಸಲು ಅನುಮತಿ ಕೊಡಬಾರದು ಎಂದೇ ತಮಗನಿಸುತ್ತದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ. ಪಾದ್ರಿಯ ಹೇಳಿಕೆ ಇರುವ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...