alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ದಿಲ್ಲದೇ ಇಡೀ ಕುಟುಂಬವನ್ನು ಹತ್ಯೆ ಮಾಡಿದ್ದಳು ಹಂತಕಿ

ಕೇರಳದಲ್ಲೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ದಾರಿಗೆ ಅಡ್ಡಲಾಗಿದ್ದ ಕುಟುಂಬ ಸದಸ್ಯರನ್ನು ಕಳೆದ ಐದು ವರ್ಷಗಳಿಂದ ಸಣ್ಣ ಸುಳಿವೂ ಸಿಗದಂತೆ ಒಬ್ಬೊಬ್ಬರನ್ನಾಗಿ ಹತ್ಯೆ ಮಾಡಿದ್ದು, ಕಡೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಉತ್ತರ ಕೇರಳದ ಪಿನರಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತಿಯಿಂದ ದೂರವಾಗಿದ್ದ ಸೌಮ್ಯ ಎಂಬಾಕೆ ತನ್ನ ಪೋಷಕರೊಂದಿಗೆ ಇಲ್ಲಿ ವಾಸಿಸುತ್ತಿದ್ದಳು. 2013 ರಲ್ಲಿ ಸೌಮ್ಯಳ ಒಂದು ವರ್ಷದ ಮಗಳು ಕೀರ್ತನಾ ಸಾವನ್ನಪ್ಪಿದ್ದು, ಅನಾರೋಗ್ಯದ ಕಾರಣಕ್ಕೆ ಸಾವನ್ನಪ್ಪಿರಬಹುದೆಂದು ಗ್ರಾಮಸ್ಥರು ಭಾವಿಸಿದ್ದರು.

ಆದರೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸೌಮ್ಯ ಕುಟುಂಬದಲ್ಲಿ ಸರಣಿ ಸಾವು ಸಂಭವಿಸಿದ್ದು, ಜನವರಿಯಲ್ಲಿ ಸೌಮ್ಯಳ ಪುತ್ರಿ 6 ವರ್ಷದ ಐಶ್ವರ್ಯಾ ಸಾವನ್ನಪ್ಪಿದ್ದಳು. ಬಳಿಕ ಮಾರ್ಚ್ 7 ರಂದು ಸೌಮ್ಯಳ ತಾಯಿ 65 ವರ್ಷದ ವೇದಾವತಿ ಕಮಲಾ ಹಾಗೂ ಏಪ್ರಿಲ್ 13 ಸೌಮ್ಯಳ ತಂದೆ 76 ವರ್ಷದ ಕುಂಜಿಕಣ್ಣನ್ ಸಾವಿಗೀಡಾಗಿದ್ದರು. ಎಲ್ಲರೂ ಸಾವನ್ನಪ್ಪುವ ಮುನ್ನ ತೀವ್ರ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಇದು ಗ್ರಾಮಸ್ಥರ ಅನುಮಾನಕ್ಕೆ ಕಾರಣವಾಯಿತು.

ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದು, ನ್ಯಾಯಾಲಯದ ಅನುಮತಿ ಪಡೆದ ಪೊಲೀಸರು ಮಣ್ಣು ಮಾಡಲಾಗಿದ್ದ ಸೌಮ್ಯ ಕುಟುಂಬ ಸದಸ್ಯರ ಒಂದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಅಸಲಿಯತ್ತು ಬಯಲಾಗಿದೆ. ಮೃತ ಶರೀರದಲ್ಲಿ ವಿಷದ ಅಂಶ ಪತ್ತೆಯಾಗಿದ್ದು, ನಂತರ ಸೌಮ್ಯಳನ್ನು ವಶಕ್ಕೆ ಪಡೆದ ಪೊಲೀಸರು ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ತಾನೇ ಈ ಹತ್ಯೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆನ್ನಲಾಗಿದೆ. ಇದೀಗ ಆಕೆಗೆ ಸಹಕರಿಸಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಕ್ರಮ ಸಂಬಂಧವೇ ಈ ಹೀನ ಕೃತ್ಯಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...