alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ನಿರ್ಮಿಸಲು ಬಡ್ಡಿ ರಹಿತ ಸಾಲ ನೀಡಲು ಸಿದ್ದತೆ…?

ಕೇರಳದಲ್ಲಿನ ಪ್ರವಾಹ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಪ್ರವಾಹದಲ್ಲಿ ಜನ ಮನೆ ಕಳೆದು ಕೊಂಡಿದ್ದಾರೆ. ಹೀಗಾಗಿ ಕೇರಳ ಸರ್ಕಾರ ಮನೆ ನಿರ್ಮಿಸಲು ಉಚಿತ ಸಾಲ ನೀಡಲು ಸಿದ್ದತೆ ಮಾಡಿಕೊಳ್ತಾ ಇದೆ ಎನ್ನಲಾಗಿದೆ.

ಮನೆ ಕಟ್ಟಿಕೊಳ್ಳಲು ಬಡ್ಡಿ ರಹಿತ ಸಾಲ ನೀಡಲು ಸರ್ಕಾರ ಯೋಜನೆಯನ್ನು ರೂಪಿಸ್ತಾ ಇದೆ. ಬಡ್ಡಿಯನ್ನು ಸರ್ಕಾರ ಭರಿಸಲಿದೆ. ಪ್ರವಾಹದಿಂದ ಕೇರಳ ಕಂಗಾಲಾಗಿದೆ. ಸುಮಾರು 231 ಜನ ಪ್ರಾಣ ಕಳೆದುಕೊಂಡ್ರೆ, 26000ಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಪ್ರವಾಹದಿಂದ ಕೇರಳಕ್ಕೆ ಸುಮಾರು 20 ಸಾವಿರ ಕೋಟಿ ಹಾನಿಯಾಗಿದ್ದಾಗಿ ಅಂದಾಜಿಸಲಾಗಿದೆ. ರಸ್ತೆ, ಸೇತುವೆ, ಕಾಂಪ್ಲೆಕ್ಸ್ ಗಳ ಪುನರ್ ನಿರ್ಮಾಣ ಕೇರಳ ಸರ್ಕಾರಕ್ಕೆ ಸವಾಲಾಗಿದೆ. ಪ್ರವಾಹದ ಹೊಡೆತಕ್ಕೆ 26 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ ಸುಮಾರು 40 ಸಾವಿರ ಹೆಕ್ಟರ್ ನಷ್ಟು ಬೆಳೆ ನಾಶ ಆಗಿದ್ದು, ಸುಮಾರು 46 ಸಾವಿರ ಹಾಲು ನೀಡುವ ಪ್ರಾಣಿ, ಹಾಗೂ 2 ಲಕ್ಷಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ.

ಪ್ರವಾಹದಿಂದ ಮಲ್ಟಿಪಲ್ ಕಾಂಪ್ಲೆಕ್ಸ್, ಅಂಗಡಿಗಳು, ವಾಣಿಜ್ಯ ಮಳಿಗೆಗಳು ಹಾಗೂ ಸೇತುವೆಗಳಿಗೆ ಹಾನಿಯಾಗಿದೆ. ದೂರ ಸಂಪರ್ಕ ಹಾಗೂ ವಿದ್ಯುತ್ ತಂತಿಗಳೂ ಹಾನಿಗೀಡಾಗಿವೆ. ಪ್ರವಾಹದಿಂದ ವಿದ್ಯುತ್ ಇಲಾಖೆಗೆ 750 ಕೋಟಿ ರೂಪಾಯಿ ನಷ್ಟವಾಗಿದ್ದರೆ, ನೀರು ನಿರ್ವಹಣಾ ಮಂಡಳಿಗೂ ಸುಮಾರು 900 ಕೋಟಿ ರೂಪಾಯಿ ನಷ್ಟವಾಗಿದೆ.

ಕೇರಳ ಸರ್ಕಾರ ಪುನರ್ ನಿರ್ವಹಣಾ ಕಾರ್ಯಕ್ಕಾಗಿ ಸುಮಾರು 1000 ಕೋಟಿ ಸಾಲ ಪಡೆಯಲಿದೆ. ಇನ್ನು ರಾಜ್ಯದ ಜಿ.ಡಿ.ಪಿಯನ್ನು ಹೆಚ್ಚಿಸಲು ಕೇರಳ ಸರ್ಕಾರ ವಿಭಿನ್ನ ಯೋಜನೆಯನ್ನು ರೂಪಿಸಿಕೊಳ್ಳಲು ಸಿದ್ಧತೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...