alex Certify
ಕನ್ನಡ ದುನಿಯಾ       Mobile App
       

Kannada Duniya

ಚಪ್ಪಲಿಯಲ್ಲಿ ಕ್ಯಾಮರಾ ಇಟ್ಟು ಕಾಮುಕ ಮಾಡ್ತಿದ್ದಿದ್ದು ಈ ಕೆಲಸ

ಕೆಲವು ದಿನಗಳ ಹಿಂದಷ್ಟೆ ಮಹಿಳೆಯರ ಬೆನ್ನಿನ ಫೋಟೋ ತೆಗೆಯುತ್ತಿದ್ದ ಕಾಮುಕನ ಬಂಡವಾಳ ಸಾಮಾಜಿಕ ಜಾಲತಾಣದಲ್ಲಿ ಬಯಲಾಗಿತ್ತು. ಇದೀಗ ಕೇರಳದ ತ್ರಿಶೂರ್ ನಲ್ಲಿ ಅಂಥದ್ದೇ ಮತ್ತೊಂದು ಆಘಾತಕಾರಿ ಕೃತ್ಯ ಬೆಳಕಿಗೆ ಬಂದಿದೆ.

ಬಿಜ್ಜು ಎಂಬ ವ್ಯಕ್ತಿ ತನ್ನ ಚಪ್ಪಲಿಯಲ್ಲಿ ಕ್ಯಾಮರಾ ಇಟ್ಟುಕೊಂಡಿದ್ದ. ಸ್ಕರ್ಟ್ ಧರಿಸಿರೋ ಹೆಣ್ಣುಮಕ್ಕಳ  ಕೆಳಭಾಗವನ್ನು ಆ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ. ತನ್ನ ಮೊಬೈಲ್ ಅನ್ನೇ ಚಪ್ಪಲಿಯ ಒಳಗೆ ನೀಟಾಗಿ ಹಾಕಿ ಹೊಲಿದಿದ್ದ.

ಸರಿಯಾಗಿ ಮೊಬೈಲ್ ಕ್ಯಾಮರಾಗೆ ಕಾಣುವಂತೆ ಚಿಕ್ಕದೊಂದು ತೂತು ಮಾಡಿಕೊಂಡಿದ್ದ. ಚಪ್ಪಲಿ ಹಾಕಿಕೊಂಡಾಗ ಮೊಬೈಲ್ ಒಡೆದು ಹೋಗದಂತೆ ಅದಕ್ಕೆ ನೀಟಾಗಿ ಸ್ಟೀಲ್ ಕವರ್ ಹಾಕಿದ್ದ. ಅತ್ತಿತ್ತ ಓಡಾಡುತ್ತ ಸ್ಕರ್ಟ್ ತೊಟ್ಟಿದ್ದ ಹುಡುಗಿಯರ ವಿಡಿಯೋ ಮಾಡುತ್ತಿದ್ದ.

ಅವನ ನಡೆ ಪೊಲೀಸರಲ್ಲಿ ಅನುಮಾನ ಹುಟ್ಟುಹಾಕಿತ್ತು. ಪೊಲೀಸರು ಆತನನ್ನು ಹಿಡಿದು ವಿಚಾರಣೆ ಮಾಡಿದಾಗ ಚಪ್ಪಲಿ ಕ್ಯಾಮರಾ ರಹಸ್ಯ ಬೆಳಕಿಗೆ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...