alex Certify
ಕನ್ನಡ ದುನಿಯಾ       Mobile App
       

Kannada Duniya

ನನ್ ಅತ್ಯಾಚಾರ ಪ್ರಕರಣಕ್ಕೆ ‘ಬಿಗ್ ಟ್ವಿಸ್ಟ್’

ಕೇರಳದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಅತ್ಯಾಚಾರ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.

ಬಿಷಪ್ ವಿರುದ್ಧ ಅತ್ಯಾಚಾರ ದೂರು ಸಲ್ಲಿಸಿದ ಕೇರಳ ನನ್ (ಕ್ರೈಸ್ತ ಸನ್ಯಾಸಿನಿ) ಸಹೋದರನಿಗೆ ಪ್ರಕರಣ ವಾಪಾಸು ಪಡೆದುಕೊಳ್ಳಲು 5 ಕೋಟಿ ರೂ. ಲಂಚದ ಆಫರ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬಿಷಪ್ ಫ್ರಾಂಕೊ ಮುಲ್ಲಕ್ಕಲ್ ಅವರ ಸಂಬಂಧಿ ದೂರನ್ನು ಹಿಂತೆಗೆದುಕೊಂಡರೆ 5 ಕೋಟಿ ರೂಪಾಯಿ ನೀಡಲು ನನ್ ಸಹೋದರನ ಸ್ನೇಹಿತನ ಮೂಲಕ ಪ್ರಸ್ತಾಪ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದೇ ವೇಳೆ ಕಳೆದ ಐದು ದಿನಗಳಿಂದ ಬಿಷಪ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇರಳ ಹೈಕೋರ್ಟ್ ಬಳಿ ಐದು ನನ್ ಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಷಪ್​ ರಾಜಕೀಯ, ಹಣದ ಬಲ ಬಳಸಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ರೋಮನ್ ಕ್ಯಾಥೋಲಿಕ್ ಚರ್ಚ್​ನ ಪ್ರಧಾನ ಕಚೇರಿ ವ್ಯಾಟಿಕನ್​ ಗೂ ಪತ್ರ ಬರೆದಿದ್ದಾರೆ.

2014ರಿಂದ 2016 ರ ಅವಧಿಯಲ್ಲಿ 13 ಬಾರಿ ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು 46 ವರ್ಷದ ನನ್,​ ಬಿಷಪ್​ ವಿರುದ್ಧ ಈ ಹಿಂದೆಯೇ ದೂರು ನೀಡಿದ್ದರು. ಈ ಆರೋಪವನ್ನು ಬಿಷಪ್​ ಅಲ್ಲಗಳೆದಿದ್ದಾರೆ. ಚರ್ಚ್ ಗೆ ವಿರುದ್ಧವಾದವರು ಈ ರೀತಿ ಅಪಪ್ರಚಾರ ಮಾಡುತ್ತಿದ್ದು, ಸಿಸ್ಟರ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...