alex Certify
ಕನ್ನಡ ದುನಿಯಾ       Mobile App
       

Kannada Duniya

ಆಘಾತಕಾರಿ ಕೃತ್ಯವೆಸಗಿದ್ದಾಳೆ 8 ದಿನಗಳ ಬಾಣಂತಿ

ಮಕ್ಕಳನ್ನು ತಾಯಿಯಷ್ಟು ಚೆನ್ನಾಗಿ ಯಾರೂ ನೋಡಿಕೊಳ್ಳಲಾರರು ಎಂಬ ಮಾತಿದೆ. ಆದರೆ, ತಾಯಿ ಹೆಸರಿಗೆ ಕಳಂಕ ತರುವ ಕೃತ್ಯವೊಂದು ಕೇರಳದಲ್ಲಿ ನಡೆದಿದೆ.

ಮುರಿಕಾಟ್ಟುಕುಡಿ ಪ್ರದೇಶದಲ್ಲಿ 28 ವರ್ಷದ ಮಹಿಳೆಯೊಬ್ಬಳು ತನ್ನ 8 ದಿನದ ಹಸುಗೂಸನ್ನು ಕೊಂದು ಹಾಕಿದ್ದಾಳೆ. ಅದಕ್ಕೆ ಕಾರಣ ಬಣ್ಣ ಮತ್ತು ಹೋಲಿಕೆ.

ಜನಿಸಿದ್ದ ಮಗು ತನ್ನ ಗಂಡನ ಮುಖ ಮತ್ತು ಬಣ್ಣವನ್ನು ಹೋಲುತ್ತಿಲ್ಲ. ಪತಿ ತನ್ನ ನಡತೆಯ ಬಗ್ಗೆ ಅನುಮಾನ ಪಡಬಹುದೆಂದು ಭಾವಿಸಿದ ಮಹಿಳೆ ಹಸುಗೂಸಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ.

ಮಗು ಚಲನೆಯಲ್ಲಿಲ್ಲ ಎಂದು ಆತಂಕದಿಂದ ಗಂಡನಿಗೆ ತಿಳಿಸಿದ್ದಾಳೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಗ ಪರೀಕ್ಷಿಸಿದ ವೈದ್ಯರು ಮಗುವಿನ ಕುತ್ತಿಗೆ ಬಳಿ ಒತ್ತಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಮಹಿಳೆ, ಮಗುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...