alex Certify
ಕನ್ನಡ ದುನಿಯಾ       Mobile App
       

Kannada Duniya

ಸೇತುವೆ ಮೇಲೆ ಜೀವನ ಮಾಡ್ತಿವೆ 20 ಕುಟುಂಬಗಳು

ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಸಾಕಷ್ಟು ಅಸ್ತವ್ಯಸ್ಥವಾಗಿದೆ. ಮಾನ್ಸೂನ್ ಮಾರುತಗಳಿಂದಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಮಟ್ಟ ಅಪಾಯವನ್ನು ಮೀರಿದೆ. ನದಿ ಮತ್ತು ಸಮುದ್ರ ಪಾತ್ರದ ಜನರು ಪ್ರಾಣ ಉಳಿಸಿಕೊಳ್ಳೋದಕ್ಕೆ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ.

ಕೇರಳದ ಕೊಟ್ಟಾಯಂನಲ್ಲಿರುವ ಆಯ್ಮುನಮ್ ಪಂಚಾಯತ್ ವ್ಯಾಪ್ತಿಯಲ್ಲಿ 20 ಕುಟುಂಬಗಳು ಸೇತುವೆಯೊಂದರ ಮೇಲೆ ಕಳೆದ ಏಳು ದಿನಗಳಿಂದ ಆಶ್ರಯ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. 30 ವರ್ಷ ಹಳೆಯದಾದ ಪುತೇನ್ ಕಾರಿ ಮತ್ತು ಕೂಡವತ್ತುರಮ್ ನಡುವಿನ ಸೇತುವೆಯ ಮೇಲೆ 20 ಕುಟುಂಬಗಳು ವಾರದಿಂದ ಜೀವನ ನಡೆಸುತ್ತಿವೆ.

ಆಟೊ ಮತ್ತಿತರ ಲಘು ವಾಹನಗಳು ಓಡಾಡುವಷ್ಟು ಸ್ಥಳವಿರುದ ಸೇತುವೆ ಸದ್ಯ ನಿರಾಶ್ರಿತರ ಕೇಂದ್ರವಾಗಿ ಮಾರ್ಪಟ್ಟಿದೆ. ಪಂಚಾಯ್ತಿಯಿಂದಲೇ ಈ ಕುಟುಂಬಗಳಿಗೆ ಬೇಕಾದ ದಿನನಿತ್ಯದ ಆಹಾರ ಪೂರೈಕೆ ಕಾರ್ಯ ನಡೆಯುತ್ತಿದೆ. ಬೋಟ್ಗಳ ಮೂಲಕ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನ ತಲುಪಿಸಲಾಗ್ತಿದೆ.

ಹೆಚ್ಚುತ್ತಿರುವ ನೀರಿನ ಮಟ್ಟ ಸಹಜ ಸ್ಥಿತಿಗೆ ಬರುವವರೆಗೂ ಜನರನ್ನ ಮತ್ತೊಂದು ಕಡೆ ಸ್ಥಳಾಂತರಗೊಳಿಸೋಕೆ ಸಾಧ್ಯವಿಲ್ಲ ಅಂತ ಅಧಿಕಾರಿಗಳು ಹೇಳ್ತಿದ್ದಾರೆ. ಸದ್ಯ ಕೇರಳದಲ್ಲಿ ಮಳೆಯಿಂದಾಗಿ ಹಾನಿಗೊಳಗಾದವರ 182 ಕ್ಯಾಂಪ್ಗಳನ್ನ ಸರ್ಕಾರ ತೆರೆದಿದೆ. ಈ ಕ್ಯಾಂಪ್ಗಳಲ್ಲಿ 10,661 ಕುಟುಂಬಗಳ 39,406 ಮಂದಿ ರಕ್ಷಣೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...