alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿಯರಿಗೆ ಜೀನ್ಸ್ ಬ್ಯಾನ್

jeans-for-girlsಕೇರಳದ ತಿರುವನಂತಪುರಂನಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜ್ ಆಡಳಿತ ಮಂಡಳಿ, ವಿದ್ಯಾರ್ಥಿನಿಯರು ಜೀನ್ಸ್ ಧರಿಸದಂತೆ ಸುತ್ತೋಲೆ ಹೊರಡಿಸಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಗುರುವಾರದಂದು ಹೊರಡಿಸಲಾಗಿರುವ ಈ ಸುತ್ತೋಲೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯಾವ ವಸ್ತ್ರ ಧರಿಸಿ ಬರಬೇಕೆಂಬುದರ ಕುರಿತು ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಫಾರ್ಮಲ್ ಡ್ರೆಸ್ ಹಾಗೂ ಶೂ ಧರಿಸಲು ಹೇಳಿದ್ದರೆ, ವಿದ್ಯಾರ್ಥಿನಿಯರು ಜೀನ್ಸ್, ಲೆಗ್ಗಿನ್ಸ್ ಧರಿಸಿ ಕಾಲೇಜಿಗೆ ಬರಬಾರದೆಂದು ತಿಳಿಸಲಾಗಿದೆ.

ವಿದ್ಯಾರ್ಥಿನಿಯರು ಚೂಡಿದಾರ್ ಅಥವಾ ಸೀರೆ ಧರಿಸಬೇಕೆಂದು ತಿಳಿಸಲಾಗಿದ್ದು, ಇದಕ್ಕೆ ವಿದ್ಯಾರ್ಥಿನಿಯರಿಂದ ಆಕ್ಷೇಪ ವ್ಯಕ್ತವಾಗಿದೆ. ಪ್ರಾಕ್ಟಿಕಲ್ಸ್ ಸಂದರ್ಭದಲ್ಲಿ ಅತ್ತಿಂದಿತ್ತ ಓಡಾಡಬೇಕಾಗುತ್ತದೆ. ಸೀರೆ ಧರಿಸಿದರೆ ಇದಕ್ಕೆ ತೊಡಕಾಗುತ್ತದೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಈ ಹಿಂದೆಯೂ ಕೇರಳದ ಕೋಝಿಕೋಡ್ ನ ಶಿಕ್ಷಣ ಸಂಸ್ಥೆಯೊಂದು ವಿದ್ಯಾರ್ಥಿನಿಯರು ಜೀನ್ಸ್ ಧರಿಸಲು ನಿಷೇಧ ಹೇರಿದ್ದು, ವಿವಾದಕ್ಕೆ ಕಾರಣವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...