alex Certify
ಕನ್ನಡ ದುನಿಯಾ       Mobile App
       

Kannada Duniya

ಅವಿವಾಹಿತ ಯುವಕನಿಗೆ FBಯಲ್ಲಿ ಬಂದಿದೆ ಸಾವಿರಾರು ಪ್ರಪೋಸಲ್ಸ್

kerala

ಈಗ ಅವಿವಾಹಿತರಿಗೆ ಸಂಗಾತಿಗಳನ್ನು ಹುಡುಕೋದು ಕಷ್ಟದ ಕೆಲಸವೇ ಅಲ್ಲ. ಸಾಮಾಜಿಕ ತಾಣಗಳೇ ಮ್ಯಾಟ್ರಿಮೊನಿಯಂತಾಗಿಬಿಟ್ಟಿವೆ. ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿ ಗ್ರಾಮದ ನಿವಾಸಿ, 34 ವರ್ಷದ ರಂಜಿಶ್ ಕೂಡ ಇಂಥದ್ದೇ ಮ್ಯಾಟ್ರಿಮೊನಿ ಜಾಹೀರಾತನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ. ಅವನಿಗೆ ಜಗತ್ತಿನ ಮೂಲೆ ಮೂಲೆಯಿಂದ್ಲೂ ಮದುವೆ ಪ್ರಪೋಸಲ್ಸ್ ಬಂದಿವೆ.

ಸುಮಾರು ಒಂದು ವರ್ಷದಿಂದ ರಂಜಿಶ್ ಗೆ ವಧುವಿನ ಹುಡುಕಾಟ ನಡೆಯುತ್ತಲೇ ಇತ್ತು. ಮ್ಯಾಟ್ರಿಮೊನಿ ಸೈಟ್ ಗಳು, ಸಂಬಂಧಿಕರ ಸಹಾಯ ಪಡೆದ್ರೂ ಸೂಕ್ತ ವಧು ಮಾತ್ರ ಸಿಕ್ಕಿರಲಿಲ್ಲ. ಕೊನೆಗೆ ಸ್ನೇಹಿತನೊಬ್ಬ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವಂತೆ ಸಲಹೆ ಕೊಟ್ಟಿದ್ದ.

ತಾನೊಬ್ಬ ವೃತ್ತಿಪರ ಛಾಯಾಗ್ರಾಹಕ, ಹಿಂದು ಧರ್ಮಕ್ಕೆ ಸೇರಿದವನು. ತಂದೆ- ತಾಯಿ ಜೊತೆಗಿದ್ದಾರೆ. ಸಹೋದರಿಗೆ ಮದುವೆಯಾಗಿದೆ. ನನಗೆ ಸೂಕ್ತ ಸಂಗಾತಿ ಬೇಕು ಅಂತಾ ರಂಜಿಶ್ ಫೇಸ್ಬುಕ್ ನಲ್ಲಿ ಹಾಕಿದ್ದ. ಈ ಪೋಸ್ಟ್ ವೈರಲ್ ಆಗಿದೆ. 4000 ಜನರು ಇದನ್ನು ಶೇರ್ ಮಾಡಿದ್ದಾರೆ.

10,000 ಕಮೆಂಟ್ಸ್ ಕೂಡ ಬಂದಿದೆ. ವಿಶೇಷ ಅಂದ್ರೆ ಅಮೆರಿಕದ ವಿಜ್ಞಾನಿಯೊಬ್ಳು ರಂಜಿಶ್ ನನ್ನು ಮದುವೆಯಾಗಲು ಆಸಕ್ತಿ ವ್ಯಕ್ತಪಡಿಸಿದ್ದಾಳೆ. ಸಾವಿರಾರು ಪ್ರಪೋಸಲ್ಸ್ ಜೊತೆಗೆ, ಫೋನ್ ಕಾಲ್ ಮತ್ತು ಮೆಸೇಜ್ ಗಳಿಗಂತೂ ಲೆಕ್ಕವೇ ಇಲ್ಲದಂತಾಗಿದೆ. ಅವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳೋದು ಅನ್ನೋದೇ ಸದ್ಯ ರಂಜಿಶ್ ಗಿರುವ ಗೊಂದಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...