alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಮನ ಕಲಕುವ ಸ್ಟೋರಿ

bill

ಇದೊಂದು ಹೃದಯಸ್ಪರ್ಶಿ ಘಟನೆ. ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ತಾಜಾ ಉದಾಹರಣೆ. ಘಟನೆ ತಡವಾಗಿ ಬಹಿರಂಗವಾಗಿದೆಯಾದರೂ ಓದಿದವರ ಹೃದಯ ತಟ್ಟುವುದಂತೂ ಖಚಿತ.

ದುಬೈನಲ್ಲಿ ಇಂಜಿನಿಯರ್ ಆಗಿರುವ ಕೇರಳ ಮೂಲದ ಅಖಿಲೇಶ್ ಕುಮಾರ್ ಎಂಬವರು ಜನವರಿ 6 ರಂದು ತಮ್ಮ ಫೇಸ್ ಬುಕ್ ನಲ್ಲಿ ಇದನ್ನು ಪೋಸ್ಟ್ ಮಾಡಿದ್ದು, ಅಸಂಖ್ಯಾತ ಮಂದಿ ಇದನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಕೇರಳದ ಮಲಪ್ಪುರಂನಲ್ಲಿನ ರೆಸ್ಟೋರೆಂಟ್ ಒಂದಕ್ಕೆ ಅಖಿಲೇಶ್ ಕುಮಾರ್ ಊಟಕ್ಕೆಂದು ತೆರಳಿದ್ದು, ಆರ್ಡರ್ ಮಾಡಿದ್ದಾರೆ. ಊಟ ತಂದಿಟ್ಟ ವೇಳೆ ಅದನ್ನು ಆಸೆಗಣ್ಣಿನಿಂದ ಒಬ್ಬ ಬಾಲಕ ಹಾಗೂ ಬಾಲಕಿ ನೋಡುತ್ತಿರುವುದು ಅವರಿಗೆ ಕಾಣಿಸುತ್ತದೆ.

ಚಿಂದಿ ಆಯುವ ಈ ಸಹೋದರ ಹಾಗೂ ಸಹೋದರಿಯನ್ನು ಅಖಿಲೇಶ್ ಕುಮಾರ್ ಕರೆದು ಅವರಿಗೆ ಊಟ ಕೊಡಿಸುತ್ತಾರೆ. ಅವರುಗಳು ಅದನ್ನು ಸಂತೃಪ್ತಿಯಿಂದ ತಿನ್ನುವುದನ್ನು ಕಂಡ ಅಖಿಲೇಶ್ ಕುಮಾರ್ ಗೆ ಸಾರ್ಥಕ ಭಾವ ಮೂಡುತ್ತದೆ. ಅದಕ್ಕಿಂತಲೂ ಅವರಿಗೆ ಅಚ್ಚರಿಯಾಗುವುದು ಬಿಲ್ ತಂದಿಟ್ಟ ವೇಳೆ.

ಅಖಿಲೇಶ್ ಕುಮಾರ್ ಚಿಂದಿ ಆಯುವ ಮಕ್ಕಳಿಗೆ ಊಟ ಕೊಡಿಸಿದ್ದನ್ನು ನೋಡಿದ್ದ ರೆಸ್ಟೋರೆಂಟ್ ಮಾಲೀಕ, ಬಿಲ್ ಮೇಲೆ ಹಣ ಪಡೆಯಲು ನಾವು ಯಂತ್ರವಲ್ಲ ಮನುಷ್ಯರು ಎಂದು ಬರೆದಿರುತ್ತಾರಲ್ಲದೇ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ. ಇದನ್ನು ಕಂಡು ಅಖಿಲೇಶ್ ಕುಮಾರ್ ಅವರ ಕಣ್ಣಂಚು ತೇವವಾಗುತ್ತದೆ. ಈ ಬಿಲ್ ಅನ್ನು ಈಗ ಅಖಿಲೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಅಂದು ನಡೆದ ಘಟನೆಯನ್ನು ಬರೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...