alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋ ರೈಲಿನ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿದ್ದ ಭೂಪ

ಕೇರಳದ ವ್ಯಕ್ತಿಯೊಬ್ಬನನ್ನು ನಕಲಿ ವೆಬ್ ಸೈಟ್ ಸೃಷ್ಟಿಸಿದ ಆರೋಪದ ಮೇಲೆ ಚೆನ್ನೈನ ಸೈಬರ್ ಕ್ರೈಮ್ ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಜಿತ್ ಮಲಪ್ಪುರಂ ಎಂಬಾತನೇ ಬಂಧಿತ ಆರೋಪಿ.

ಚೆನ್ನೈ ಮೆಟ್ರೋ ರೈಲು  ವೆಬ್ ಸೈಟ್ ನ ವಿನ್ಯಾಸ, ಮಾಹಿತಿ ಮತ್ತು ಫೋಟೋಗ್ರಾಫ್ ಗಳನ್ನ ಕದ್ದ ಆರೋಪದ ಮೇಲೆ ಶ್ರೀಜಿತ್ ನನ್ನ ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಚೆನ್ನೈ ಮೆಟ್ರೋ ರೈಲಿನ ವೆಬ್ ಸೈಟ್ ಬಳಸಿ ನಕಲಿ ವೆಬ್ ಪೋರ್ಟಲ್ ಸೃಷ್ಟಿಸಿದ್ದ ಆತ ಉದ್ಯೋಗಾವಕಾಶಗಳ ಜಾಹೀರಾತನ್ನು ನೀಡಿದ್ದ. ಈ ಬಗ್ಗೆ ಚೆನ್ನೈನ ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಬಂಧಿತನನ್ನ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...