alex Certify
ಕನ್ನಡ ದುನಿಯಾ       Mobile App
       

Kannada Duniya

‘ಕೇರಳ ಲುಂಗಿ ಗರ್ಲ್ಸ್’ ಫೋಟೋ ಹಿಂದಿನ ಅಸಲಿ ಸತ್ಯ

mahesh babu fansಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಗಳಲ್ಲಿ ಲುಂಗಿ ಧರಿಸಿರುವ ಹುಡುಗಿಯರ ಫೋಟೋ ಒಂದು ವೈರಲ್ ಆಗಿದೆ. ಕೇರಳ ಕಾಲೇಜಿನಲ್ಲಿ ಹೆಣ್ಣು ಮಕ್ಕಳು ಜೀನ್ಸ್ ಧರಿಸುವುದನ್ನು ಬ್ಯಾನ್ ಮಾಡಿರುವ ಹಿನ್ನಲೆಯಲ್ಲಿ ಲುಂಗಿ ಧರಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆಂದು ಇದರಲ್ಲಿ ಹೇಳಲಾಗುತ್ತಿದ್ದರೂ ಅಸಲಿ ಸತ್ಯ ಬೇರೆಯೇ ಇದೆ.

ಈ ಫೋಟೋ ನೈಜವಾಗಿದ್ದು, ಆದರೆ ಅವರು ಪ್ರತಿಭಟನೆಯ ಕಾರಣಕ್ಕೆ ಲುಂಗಿ ಧರಿಸಿಲ್ಲ. ಬದಲಾಗಿ ತಮ್ಮ ಅಭಿಮಾನವನ್ನು ತೋರ್ಪಡಿಸಲು ಈ ಲುಂಗಿ ಧರಿಸಿದ್ದಾರೆಂದು ಹೇಳಲಾಗಿದೆ. ಅಂದ ಹಾಗೇ ಈ ಫೋಟೋ ತೆಗೆದಿರುವುದು 2015 ರಲ್ಲಿ.

ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಅಭಿಮಾನಿಗಳಾಗಿರುವ ಅಮೆರಿಕಾದಲ್ಲಿ ನೆಲೆಸಿರುವ ಈ ಯುವತಿಯರು ‘ಶ್ರೀಮಂತುಡು’ ಚಿತ್ರದಲ್ಲಿ ಮಹೇಶ್ ಬಾಬು ಲುಂಗಿ ಧರಿಸಿದ್ದನ್ನು ನಕಲು ಮಾಡಿ ತಮ್ಮ ಅಭಿಮಾನ ಪ್ರದರ್ಶಿಸಿದ್ದರೆಂದು ಹೇಳಲಾಗಿದೆ. ಇದೇ ಫೋಟೋವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವವರು, ಕೇರಳ ಕಾಲೇಜಿನಲ್ಲಿ ಜೀನ್ಸ್ ಬ್ಯಾನ್ ಮಾಡಿರುವುದಕ್ಕೆ ಲುಂಗಿ ಧರಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ ಎಂದು ಬಿಂಬಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...