alex Certify
ಕನ್ನಡ ದುನಿಯಾ       Mobile App
       

Kannada Duniya

ಟೋಲ್ ನಲ್ಲಿ ಕೇರಳ ಶಾಸಕನ ದರ್ಪ

ಕೇರಳದ ಶಾಸಕ ಪಿ.ಸಿ. ಜಾರ್ಜ್ ತ್ರಿಶೂರಿನ ಟೋಲ್ ನಲ್ಲಿ ಹಣ ಕೇಳಿದ್ದಕ್ಕೆ ರಂಪಾಟ ನಡೆಸಿದ್ದಾರೆ. ಅಲ್ಲದೆ ಬ್ಯಾರಿಕೇಡ್ ಮುರಿದು ಹಣ ಕೇಳ್ತಿಯಾ ಎಂದು ಅವಾಜ್ ಹಾಕಿದ್ದಾರೆ.

ಜಾರ್ಜ್ ಕೊಚ್ಚಿಯಿಂದ ತ್ರಿಶೂರಿಗೆ ಹೊರಟಿದ್ದರು. ತ್ರಿಶೂರ್ ಹೈವೈನಲ್ಲಿ ಟೋಲ್ ಕಾರ್ಮಿಕರು, ಎಂಎಲ್ಎ ಕಾರನ್ನು ತಡೆದು ಟೋಲ್ ಹಣ ಕೇಳಿದ್ದಾರೆ. ಇಷ್ಟಕ್ಕೆ ಜಾರ್ಜ್ ಕಾರಿನಿಂದ ಕೆಳಗೆ ಇಳಿದು ದರ್ಪ ತೋರಿಸಿದ್ದಾರೆ. ಜಾರ್ಜ್ ರಂಪಾಟ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಾಣುವಂತೆ ಜಾರ್ಜ್ ಟೋಲ್ ನಲ್ಲಿದ್ದ, ಅಟೋಮೆಟಿಕ್ ಬ್ಯಾರಿಕೇಡ್ ಮುರಿದಿದ್ದಾರೆ.

ಎಂಎಲ್ಎ ಕೆಳಗೆ ಇಳಿದು ದರ್ಪ ತೋರಿಸಲು ಆರಂಭಿಸಿದ್ರೆ, ಚೇಲಾಗಳು, ಸಹ ಕಾರಿನಿಂದ ಕೆಳಗೆ ಇಳಿದು ದಬ್ಬಾಳಿಕೆ ನಡೆಸಿದ್ದಾರೆ. ಕಾರಿನ ಮುಂಭಾಗದಲ್ಲಿ ಶಾಸಕ ಎಂಬ ನಾಮಫಲಕ ಇದ್ದರೂ ಕಾರು ತೆರಳಲು ಅವಕಾಶ ನೀಡದಕ್ಕೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

7 ಬಾರಿ ಶಾಸಕರಾಗಿರುವ ಜಾರ್ಜ್ ಹಿಂದೆಯೂ ವಿವಾದಗಳಿಗೆ ಒಳಗಾಗಿದ್ದರು. 2017ರಲ್ಲಿ ಶಾಸಕರ ಭವನದಲ್ಲಿ ಊಟ ತರಲು ನಿಧಾನ ಮಾಡಿದ ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...