alex Certify
ಕನ್ನಡ ದುನಿಯಾ       Mobile App
       

Kannada Duniya

ಹಲವರ ಪ್ರಾಣ ರಕ್ಷಣೆಗೆ ನೆರವಾಯ್ತು ಸೋಲಾರ್ ಘಟಕ…!

ಐದು ವರ್ಷದ ಹಿಂದೆ ತಾವು ಅಳವಡಿಸಿಕೊಂಡ ಸೋಲಾರ್ ಪ್ಯಾನಲ್ ಆಪತ್ಕಾಲದಲ್ಲಿ ತಮ್ಮ ಹಾಗೂ ಇತರರ ಜೀವನವನ್ನೇ ಉಳಿಸಬಹುದೆಂದು ಆ ಕುಟುಂಬ ನಿರೀಕ್ಷಿಸಿರಲಿಲ್ಲ. ನಿಜ, ಇಂಥದ್ದೊಂದು ಪವಾಡ ಕೇರಳದಲ್ಲಿ ನಡೆದಿದೆ. ಇತ್ತೀಚೆಗೆ ನಡೆದ ಜಲಪ್ರಳಯದಲ್ಲಿ ಕುಟುಂಬವೊಂದು ತಮ್ಮ ಮನೆಯ ಸೋಲಾರ್ ಘಟಕದಿಂದ ಬಚಾವ್ ಆಗಿದೆ. ಜತೆಗೆ ಇತರೆ ಕುಟುಂಬಕ್ಕೂ ನೆರವಾಗಿದೆ.

ಅಲ್ಲಿನ ಚೆಂಗನೂರಲ್ಲಿ ಪರಿಸರವಾದ ಡಾ.ಎ.ಪಿ.ಶ್ರೀಕುಮಾರ್ ಅವರು ಐದು ವರ್ಷದ ಹಿಂದೆ ತಮ್ಮ ಮನೆಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಂಡಿದ್ದರು.

ಇತ್ತೀಚೆಗೆ ನೆರೆ ಹಾವಳಿ ಸಂದರ್ಭದಲ್ಲಿ ಹೆಚ್ಚಿನ ಅವಘಡ ಸಂಭವಿಸಬಾರದೆಂದು ವಿದ್ಯುತ್ ವಿತರಣೆ ಇಲಾಖೆ ತನ್ನ ಸೇವೆಯನ್ನು ನಿಲ್ಲಿಸಿತ್ತು. ಈ ಸಂದರ್ಭದಲ್ಲಿ ಶ್ರೀಕುಮಾರ್ ಮನೆಗೆ ಮಾತ್ರ ಬೆಳಕಿನ ಕೊರತೆಯಾಗಲೇ ಇಲ್ಲ.

ಮೊಬೈಲ್ ಚಾರ್ಜಿಂಗ್ ಕೂಡ ಸುಲಭವಾಗಿ ಮಾಡಿಕೊಂಡು ತುರ್ತು ಸಂದೇಶಗಳನ್ನು ಕಳಿಸುವುದಕ್ಕೂ ಸಹಕಾರಿಯಾಗಿತ್ತು. ಇವರಷ್ಟೆ ಅಲ್ಲದೇ ನೆರೆಯ ಐದು ಕುಟುಂಬಕ್ಕೂ ಬೆಳಕಾಗಿದ್ದರು. ಅವರ ಮನೆಯಲ್ಲೇ ಅವರೆಲ್ಲರೂ ಮೊಬೈಲ್ ಚಾರ್ಜಿಂಗ್ ಮಾಡಿಕೊಂಡು ಹೊರ ಜಗತ್ತಿನ ಸಂಪರ್ಕದಲ್ಲಿದ್ದರು. ಈ ವ್ಯವಸ್ಥೆಯಿಂದ ಪೊಲೀಸರು ಸ್ಥಳೀಯರಿಗೆ ಸಂದೇಶ ಕಳಿಸಿ ಅನೇಕ ಜನರನ್ನು ರಕ್ಷಿಸಲೂ ಸಹಕಾರಿಯಾಗಿತ್ತೆಂದು ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...