alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಲುವಿಗಾಗಿ ಧರ್ಮ ಬಳಸಿದ ಕೇರಳ ಶಾಸಕ ಅನರ್ಹ

2016ರ ಕೇರಳ ವಿಧಾನಸಭಾ ಚುನಾವಣೆ ವೇಳೆ ಧರ್ಮದ ಹೆಸರಲ್ಲಿ ಮತ ಕೇಳಿ ಗೆಲುವು ಸಾಧಿಸಿದ್ದಾರೆ ಎಂಬ ಕಾರಣಕ್ಕೆ ಮುಸ್ಲಿಂ ಲೀಗ್ ಶಾಸಕರೊಬ್ಬರನ್ನು ಕೇರಳ ಹೈಕೋರ್ಟ್ ಅನರ್ಹಗೊಳಿಸಿದೆ.

ಕಣ್ಣೂರು ಜಿಲ್ಲೆಯ ಅಝಿಕೋಡ್ ಕ್ಷೇತ್ರದ ಶಾಸಕ ಕೆ.ಎಂ. ಶಾಜಿ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದೂ ಆದೇಶಿಸಿರುವ ಹೈಕೋರ್ಟ್, ಈ ಸಂಬಂಧ ಕ್ರಮಗಳನ್ನು ಕೈಗೊಳ್ಳುವಂತೆ ಚುನಾವಣಾ ಆಯೋಗ ಹಾಗೂ ಕೇರಳ ವಿಧಾನಸಭಾ ಸ್ಪೀಕರ್‌ಗೆ ನಿರ್ದೇಶನ ನೀಡಿದೆ.

ಶಾಜಿ ವಿರುದ್ಧ ಸ್ಪರ್ಧಿಸಿದ್ದ ಎಡರಂಗ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಎಂ.ವಿ. ನಿಕೇಶ್ ಕುಮಾರ್ ಹೈಕೋರ್ಟ್‌ನಲ್ಲಿ ಶಾಜಿ ವಿರುದ್ಧ ದಾವೆ ಹೂಡಿದ್ದರು. ಧರ್ಮದ ಹೆಸರಲ್ಲಿ ಮತ ಕೇಳುವ ಕರಪತ್ರಗಳನ್ನು ಶಾಜಿ ಕ್ಷೇತ್ರದಲ್ಲಿ ವಿತರಿಸಿದ್ದರು.

ಮುಸ್ಲಿಮೇತರ ಕುಮಾರ್‌ ಗೆ ಮತ ನೀಡಬೇಡಿ ಎಂದು ಅದರಲ್ಲಿ ಬರೆಯಲಾಗಿತ್ತು. ಈ ರೀತಿ ಜನಪ್ರತಿನಿಧಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಕೇವಲ 2,287 ಮತಗಳ ಅಂತರದಿಂದ ಅವರು ಗೆದ್ದಿದ್ದರು ಎಂಬುದು ಅರ್ಜಿದಾರರ ವಾದವಾಗಿತ್ತು. ಹೈಕೋರ್ಟ್ ಇದೀಗ ಈ ವಾದವನ್ನು ಮನ್ನಿಸಿ ಧರ್ಮದ ಆಧಾರದಲ್ಲಿ ಜಯಗಳಿಸಿದ ಶಾಸಕರನ್ನೇ ಅನರ್ಹಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...