alex Certify
ಕನ್ನಡ ದುನಿಯಾ       Mobile App
       

Kannada Duniya

OMG! ದೇಶದ ಸಾಕ್ಷರತಾ ರಾಜ್ಯ ಕೇರಳದಲ್ಲಿ ಒಂದು ಗಂಟೆಗೆ ಐದು ವಿಚ್ಛೇದನ

divorce-family-court

ದೇಶದಲ್ಲಿ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗ್ತಾ ಇವೆ. ಮದುವೆಯಾಗಿ ಮೊದಲ ರಾತ್ರಿಯೇ ದಂಪತಿ ಬೇರೆಯಾಗುತ್ತಿರುವ ಉದಾಹರಣೆಗಳೂ ಇವೆ. ದೇಶದ ಅತ್ಯಂತ ಹೆಚ್ಚಿನ ಸಾಕ್ಷರರಿರುವ ರಾಜ್ಯವೆಂದೇ ಹೆಸರು ಪಡೆದಿರುವ ಕೇರಳ ಇದರಲ್ಲಿ ಮುಂದಿದೆ. 2014ರಲ್ಲಿ ಕೇರಳದಲ್ಲಿ ಒಂದು ಗಂಟೆಗೆ ಐದು ದಂಪತಿ ಬೇರೆಯಾಗಿದ್ದಾರೆ. ಒಂದೇ ದಿನ 120 ಜೋಡಿ ವಿಚ್ಛೇದನ ಪಡೆದಿದ್ದಾರೆ.

2014ರಲ್ಲಿ ಕೇರಳದಲ್ಲಿ 47,525 ವಿಚ್ಛೇದನ ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದ 11 ರಾಜ್ಯಗಳಿಗೆ ಹೋಲಿಸಿದ್ರೆ ಕೇರಳ ಇದ್ರಲ್ಲಿ ಮುಂದಿದೆ. ಮಹಾರಾಷ್ಟ್ರದಲ್ಲಿ ಕೇರಳದ ಅರ್ಧದಷ್ಟು ವಿಚ್ಛೇದನ ಪ್ರಕರಣಗಳು ನಡೆದಿವೆ. ಕೇರಳಕ್ಕೆ ಹೋಲಿಸಿದ್ರೆ ಮಹಾರಾಷ್ಟ್ರದ ಜನಸಂಖ್ಯೆ ದುಪ್ಪಟ್ಟಿದೆ. ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಮಹಿಳಾ ಸಾಕ್ಷರತೆ ಸರಾಸರಿಗಿಂತ ಹೆಚ್ಚಿದೆ. ಜೊತೆಗೆ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಿದೆ. ಆದಾಗ್ಯೂ ಇಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗ್ತಾ ಇವೆ.

ಮಹಿಳಾ ಸಾಕ್ಷರತೆಯಲ್ಲಿ ಮೂರನೇ ಸ್ಥಾನದಲ್ಲಿರುವ ಮಧ್ಯಪ್ರದೇಶ ವಿಚ್ಛೇದನ ವಿಚಾರದಲ್ಲಿ 6ನೇ ಸ್ಥಾನದಲ್ಲಿದೆ. ಹರ್ಯಾಣ ಐದನೇ ಸ್ಥಾನದಲ್ಲಿದ್ದು, ಕೇರಳಕ್ಕಿಂತ ಶೇಕಡಾ 80ರಷ್ಟು ಕಡಿಮೆ ಪ್ರಮಾಣದಲ್ಲಿ ವಿಚ್ಛೇದನ ಪ್ರಕರಣಗಳು ದಾಖಲಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...