alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಕ್ಷರತಾ ಅಜ್ಜಿಗೆ ಈಗ ಕಂಪ್ಯೂಟಕ್ ಕಲಿಯುವ ತವಕ…..

ತಿರುವನಂತಪುರ: ಇತ್ತೀಚೆಗಷ್ಟೇ ಕೇರಳ ರಾಜ್ಯಕ್ಕೆ ಫಸ್ಟ್ ಬಂದಿದ್ದ 96ರ ಹರೆಯದ ಸಾಕ್ಷರತಾ ಅಜ್ಜಿ ಇದೀಗ ಕಂಪ್ಯೂಟರ್ ಕಲಿಯುತ್ತಿದ್ದಾರೆ. ರಾಜ್ಯ ಮಟ್ಟದ ನಾಲ್ಕನೇ ತರಗತಿಯ ಸಾಕ್ಷರತಾ ಪರೀಕ್ಷೆಯಲ್ಲಿ 100 ಕ್ಕೆ 98 ಅಂಕ ಗಳಿಸಿದ್ದ ಕಾತ್ಯಾಯಿನಿ ಅಮ್ಮ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಕಂಪ್ಯೂಟರ್ ಕಲಿಕೆಯ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು.

ಅಜ್ಜಿಯ ಅದಮ್ಯ ಉತ್ಸಾಹಕ್ಕೆ ಮಾರುಹೋದ ಕೇರಳದ ಶಿಕ್ಷಣ ಸಚಿವ ಪ್ರೊ.ಸಿ. ರವೀಂದ್ರನಾಥ ಅವರು ಕಾತ್ಯಾಯಿನಿ ಅಮ್ಮನಿಗೆ ಇದೀಗ ದೀಪಾವಳಿ ಕೊಡುಗೆಯಾಗಿ ಲ್ಯಾಪ್ ಟಾಪ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ವತಃ ಸಚಿವರೇ ಕಾತ್ಯಾಯಿನಿ ಅಮ್ಮನಿಗೆ ತನ್ನ ಹೆಸರನ್ನು ಲ್ಯಾಪ್ ಟ್ಯಾಪ್ ನಲ್ಲಿ ಬರೆಯುವುದನ್ನು ಕಲಿಸಿಕೊಟ್ಟಿದ್ದಾರೆ. ಕಾತ್ಯಾಯಿನಿ ಅಮ್ಮ ಸಚಿವರು ಹೇಳಿಕೊಟ್ಟದ್ದನ್ನು ಸಂತೋಷದಿಂದಲೇ ಕಲಿತಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ 96ರ ಹರೆಯದ ಉತ್ಸಾಹಿ ಅಜ್ಜಿ, ಕಲಿಯಬೇಕಾಗಿದ್ದ ವಯಸ್ಸಿನಲ್ಲಿ ನನಗೆ ಕಲಿಯಲು ಸಾಧ್ಯವಾಗಲಿಲ್ಲ. ಸಣ್ಣ ಮಕ್ಕಳು ಓದುವುದು, ಬರೆಯುವುದನ್ನು ನೋಡಿ ನನಗೂ ಕಲಿಯಬೇಕೆನಿಸಿತು. ಶಿಕ್ಷಕರೊಬ್ಬರು ನನ್ನಲ್ಲಿ ಕಲಿಯಲು ನಿಮಗೆ ಆಸಕ್ತಿ ಇದೆಯೇ ಎಂದು ಕೇಳಿದ ತಕ್ಷಣ ಹೌದು ಅಂದುಬಿಟ್ಟೆ. ಇದೀಗ ನನ್ನ ಬಿಡುವಿನ ವೇಳೆಯಲ್ಲಿ ಕಂಪ್ಯೂಟರ್ ಕಲಿಯುತ್ತೇನೆ ಎಂದಿದ್ದಾರೆ.

ಇಳಿ ವಯಸ್ಸಿನಲ್ಲೂ ಯಾವುದೇ ಕಾಯಿಲೆಯಿಲ್ಲದೆ ಆರೋಗ್ಯವಾಗಿರುವ ಕಾತ್ಯಾಯಿನಿ ಅಮ್ಮನಿಗೆ ಇದೀಗ ಕೇರಳ ಸಾಕ್ಷರತಾ ಮಿಷನ್ ನಡೆಸುವ 10ನೇ ತರಗತಿ ಪರೀಕ್ಷೆಯನ್ನು ಪಾಸ್ ಮಾಡುವ ಗುರಿ ಇದೆಯಂತೆ. ಈ ವಯಸ್ಸಿನಲ್ಲಿ ನನಗ್ಯಾಕಪ್ಪ ಪರೀಕ್ಷೆ ಎಂದು ನಿರಾಸೆಯ ಮಾತನಾಡುವವರ ನಡುವೆ ಕಾತ್ಯಾಯಿನಿ ಅಮ್ಮ ಉತ್ಸಾಹ ಮೆಚ್ಚುವಂಥದ್ದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...