alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ನಾಡಿನಲ್ಲಿ ಆದ ಹಾನಿ ಎಷ್ಟು ಗೊತ್ತಾ…?

ಕೇರಳದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿ ಆಗಿದೆ. ಜನರು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಕೇರಳದ ಕೆಲವು ಗ್ರಾಮಗಳು ಜಲಾವೃತವಾಗಿವೆ. ದೇವರ ನಾಡಿನಲ್ಲಿ ಮಳೆಯ ಅಟ್ಟಹಾಸದಿಂದ ಸುಮಾರು 20 ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಕೇರಳದ ಸುಮಾರು 9 ಜಿಲ್ಲೆಗಳು ಸಮುದ್ರ ತಟಕ್ಕೆ ಹೊಂದಿಕೊಂಡಿದ್ದು, ಇದರಲ್ಲಿ ಇಡುಕ್ಕಿ ಜಿಲ್ಲೆ ಕೂಡಾ ಒಂದು. ಈ ಜಿಲ್ಲೆಯಲ್ಲಿ ಗದ್ದೆ ಹಾಗೂ ಮನೆಗಳು ಜಲಾವೃತವಾಗಿವೆ. ಮಲ್ಲಪುರಂ, ಕೊಟ್ಟಾಯಂ ಮತ್ತು ಎರ್ನಾಕುಲಂಗಳಲ್ಲೂ ಭಾರಿ ನಷ್ಟವಾಗಿದೆ. ಸದ್ಯ ಕೇರಳದಲ್ಲಿ ಮಳೆ ತನ್ನ ರುದ್ರನರ್ತನವನ್ನು ಕಡಿಮೆ ಮಾಡಿದ್ದರಿಂದ ಪರಿಹಾರ ಕಾರ್ಯ ಭರದಿಂದ ಸಾಗಿದೆ.

ಕೇರಳದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ 680 ಕೋಟಿಯ ಮಧ್ಯಂತರ ಪ್ಯಾಕೇಜ್ ಘೋಷಣೆ ಮಾಡಿದೆ. ಆದ್ರೆ, ಕೇರಳ ಸರ್ಕಾರ 2600 ಕೋಟಿ ರೂಪಾಯಿ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಪ್ರವಾಹದಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದು, 10 ಲಕ್ಷಕ್ಕೂ ಹೆಚ್ಚು ಜನ ಗಂಜಿ ಕೇಂದ್ರದ ಆಸರೆ ಪಡೆದಿದ್ದಾರೆ.

ಎನ್.ಡಿ.ಆರ್.ಎಫ್, ನ ಸುಮಾರು 58 ಬೆಟಾಲಿಯನ್ ಗಳು ಪ್ರವಾಹ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿವೆ. ಕೇಂದ್ರ, ಕೇರಳಕ್ಕೆ 89,540 ಟನ್ ಆಹಾರ ಧಾನ್ಯಗಳನ್ನು ನೀಡಿದೆ. ಅಲ್ಲದೆ ವಿವಿಧ ರಾಜ್ಯ ಸರ್ಕಾರಗಳು ಕೂಡಾ ಆರ್ಥಿಕ ನೆರವನ್ನು ನೀಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...