alex Certify
ಕನ್ನಡ ದುನಿಯಾ       Mobile App
       

Kannada Duniya

ಕಷ್ಟದಲ್ಲಿರುವವರಿಗೆ ಸ್ಪಂದಿಸಿದ ಕಾಲೇಜು ವಿದ್ಯಾರ್ಥಿನಿ

ತಿರುವನಂತಪುರ: ಇತ್ತೀಚೆಗೆ ಟ್ರೋಲಿಗರಿಗೆ ಸಿಕ್ಕಿ ಸುದ್ದಿಯಾಗಿದ್ದ ಕಾಲೇಜು ಹುಡುಗಿಯೊಬ್ಬಳು ಮುಖ್ಯಮಂತ್ರಿ ಪರಿಹಾರ ನಿಧಿಗೆ 1.5 ಲಕ್ಷ ರೂ. ನೀಡಿದ್ದಾಳೆ.

ಕೊಚ್ಚಿಯ 21 ವರ್ಷದ ಹನನ್‌ ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಳು. ಕಾಲೇಜು ಕಲಿಕೆಯ ಜೊತೆಗೆ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಳು.

ಮಾಧ್ಯಮಗಳಲ್ಲಿ ಸುದ್ದಿಯಾದ ಹನನ್‌ಗೆ ವಿದ್ಯಾಭ್ಯಾಸಕ್ಕಾಗಿ ಅನೇಕರು ದೇಣಿಗೆ ನೀಡಿದ್ದರು. ಕೇರಳದ ಅನೇಕ ಭಾಗದಲ್ಲಿ ಪ್ರವಾಹದಿಂದ ಸಂಕಷ್ಟದಲ್ಲಿರುವುದರಿಂದ, ಅಗತ್ಯದ ಜನರಿಗೆ ಹಣ ಸಿಗಲಿ ಎಂಬ ಆಶಯದೊಂದಿಗೆ ಸಿಎಂ ಪರಿಹಾರ ನಿಧಿಗೆ ದೇಣಿಗೆ ಹಣವನ್ನು ಅರ್ಪಿಸಿದ್ದಾಳೆ.

ಮಲೆಯಾಳದ ದಿನಪತ್ರಿಕೆಯಲ್ಲಿ ಹನನ್‌ ಕುರಿತಾದ ಸುದ್ದಿ, ವೈರಲ್‌ ಆಗಿತ್ತು. ಟ್ರೋಲಿಗರು ಇದನ್ನು ಸುಳ್ಳು ಸುದ್ದಿ ಎಂದೂ ಹಬ್ಬಿಸಿದ್ದರು. ಹನನ್‌ ಜತೆಗೆ ಅನೇಕ ಜನರು, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ದೃಶ್ಯಗಳು ಕೇರಳದಲ್ಲಿ ಸಾಮಾನ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...