alex Certify
ಕನ್ನಡ ದುನಿಯಾ       Mobile App
       

Kannada Duniya

ನೆಚ್ಚಿನ ತಂಡ ಸೋತ ಹಿನ್ನಲೆಯಲ್ಲಿ ಮನೆ ಬಿಟ್ಟು ಹೋಗಿದ್ದ ಯುವಕ ಶವವಾಗಿ ಪತ್ತೆ

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್ ನಲ್ಲಿ ತನ್ನ ನೆಚ್ಚಿನ ತಂಡ ಅರ್ಜೆಂಟೈನಾ, ಕ್ರೊವೇಶಿಯಾ ವಿರುದ್ಧದ ಪಂದ್ಯದಲ್ಲಿ ಪರಾಭವಗೊಂಡ ಕಾರಣ ಡೆತ್ ನೋಟ್ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದ ಕೇರಳದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

ಕೊಟ್ಟಾಯಂನ ಅರುಮನೂರು ಗ್ರಾಮದ 30 ವರ್ಷದ ದಿನೂ ಜೋಸೆಫ್ ಸಾವನ್ನಪ್ಪಿದವನಾಗಿದ್ದು, ಗುರುವಾರ ನಡುರಾತ್ರಿಯವರೆಗೂ ಫುಟ್ಬಾಲ್ ಪಂದ್ಯ ವೀಕ್ಷಿಸಿದ್ದ ಈತ, ಶುಕ್ರವಾರ ಬೆಳಗಿನ ಜಾವ ಮನೆಯಿಂದ ಹೋಗಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಡೆತ್ ನೋಟ್ ಆಧಾರದ ಮೇಲೆ ಸಮೀಪದ ನದಿಯಲ್ಲಿ ಹುಡುಕಾಟ ನಡೆಸಿದ್ದು, ಭಾನುವಾರ ಶವ ಪತ್ತೆಯಾಗಿದೆ. ಅರ್ಜೆಂಟೈನಾ ಫುಟ್ಬಾಲ್ ತಂಡದ ಅಭಿಮಾನಿಯಾಗಿದ್ದ ಈತ, ಈ ತಂಡದ ನಾಯಕ ಮೆಸ್ಸಿ ಹುಟ್ಟು ಹಬ್ಬದ ದಿನದಂದೇ ಶವವಾಗಿ ಪತ್ತೆಯಾಗಿರುವುದು ದುರಂತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...