alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರ ಮನಗೆದ್ದಿದೆ ಪ್ರವಾಹ ಸಂತ್ರಸ್ತರನ್ನು ರಕ್ಷಿಸಿರುವ ಯೋಧರ ವಿಡಿಯೋ

ತಿರುವನಂತಪುರಂ: ಕೇರಳದಲ್ಲಿ ಕೃತಕ ಕಾಲು ಅಳವಡಿಸಲಾಗಿದ್ದ ವ್ಯಕ್ತಿಯೋರ್ವನನ್ನು ಪ್ರವಾಹ ಪೀಡಿತ ಪ್ರದೇಶದಿಂದ ರಕ್ಷಿಸಿದ ಯೋಧರ ವಿಡಿಯೋ ಇದೀಗ ಎಲ್ಲರ ಮನಗೆದ್ದಿದೆ.

ಭೂ ಸೇನೆ ಹಾಗೂ ನೌಕಾದಳದ ಯೋಧರು, ಮನೆಯ 2ನೇ ಮಹಡಿಯಲ್ಲಿದ್ದ ಕೃತಕ ಕಾಲು ಅಳವಡಿಸಿದ್ದ ವ್ಯಕ್ತಿಯೋರ್ವರನ್ನು ಬೋಟ್‌ಗೆ ಇಳಿಸುವ ಸಂಪೂರ್ಣ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಸೇನೆಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಾಕಲಾಗಿದ್ದು, ಈಗ ವೈರಲ್ ಆಗಿದೆ.

ಪ್ರವಾಹದಿಂದಾಗಿ ಮನೆಯ ಒಂದು ಮಹಡಿ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ರಕ್ಷಣಾ ಕಾರ್ಯಾಚರಣೆಯ ಯೋಧರು, ಈ ವ್ಯಕ್ತಿಯನ್ನು ಹೆಗಲಲ್ಲಿ ಹೊತ್ತು, ಏಣಿಯ ಮೂಲಕ ಬೋಟ್‌ಗೆ ಇಳಿಸಿದ್ದಾರೆ. ಸಾಹಸೀಯ ಕ್ಷಣವನ್ನು ಪ್ರತಿಯೊಬ್ಬರೂ ಮೆಚ್ಚಿದ್ದಾರೆ. ಅಲ್ಲದೆ ಈ ವಿಡಿಯೋಕ್ಕೆ ಸೇನಾ ಪಡೆ, ‘ನೀವೆಲ್ಲೇ ಇರಿ, ನಾವು ನಿಮ್ಮನ್ನು ರಕ್ಷಿಸುತ್ತೇವೆ’ ಎಂಬ ಟ್ಯಾಗ್‌ಲೈನ್‌ ಸಹ ನೀಡಿರುವುದು ಪೋಸ್ಟ್‌ ಮಾಡಿದ 4 ಗಂಟೆಗಳಲ್ಲಿ 62 ಸಾವಿರ ಮಂದಿಯ ಲೈಕ್‌, ನೂರಾರು ಕಮೆಂಟ್ಸ್‌ ಗಳಿಗೆ ಕಾರಣವಾಗಿದೆ. ಅನೇಕ ಮಂದಿ ಯೋಧರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Wherever you are #wewillsaveyou #havefaith #IndianArmy #OpMadad #Keralafloods2018

A post shared by Indian Army (@indianarmy.adgpi) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...