alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದ ಮಟ್ಟ ಕಡಿಮೆಯಾಗ್ತಿದ್ದಂತೆ ಶುರುವಾಯ್ತು ಇನ್ನೊಂದು ಆತಂಕ

ಕೇರಳ ಶತಮಾನದ ಅತಿದೊಡ್ಡ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಅಬ್ಬರಿಸಿದ್ದ ಮಳೆ ಕಡಿಮೆಯಾಗಿದ್ದು, ಪ್ರವಾಹದ ಮಟ್ಟ ಇಳಿಯುತ್ತಿದೆ. ಇದು ಜನರನ್ನು ಸ್ವಲ್ಪಮಟ್ಟಿಗೆ ನಿರಾಳಗೊಳಿಸಿದೆ. ಆದ್ರೆ ಇನ್ನೊಂದು ಸಮಸ್ಯೆ ಜನರಲ್ಲಿ ಆತಂಕ ಮೂಡಿಸಿದೆ. ಮಳೆ, ಪ್ರವಾಹ, ಮನೆ, ಭೂಮಿ ಕಳೆದುಕೊಂಡ ಜನರಿಗೆ ಸಾಂಕ್ರಾಮಿಕ ರೋಗದ ಭಯ ಶುರುವಾಗಿದೆ.

ಕೇರಳದ ಆರೋಗ್ಯ ಮಂತ್ರಿಗಳು ಕೂಡ ಸಾಂಕ್ರಾಮಿಕ ರೋಗಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈವರೆಗೆ ಎಲ್ಲವೂ ಸರಿಯಿದೆ. ಆದ್ರೆ ಸಾಂಕ್ರಾಮಿಕ ರೋಗಗಳು ಕಾಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸೂಕ್ತ ಕ್ರಮಕೈಗೊಳ್ಳುತ್ತಿದ್ದೇವೆಂದು ಅವ್ರು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗ್ತಿದೆ. ರಾಜ್ಯದಲ್ಲಿ ಈವರೆಗೆ 3500ಕ್ಕೂ ಹೆಚ್ಚು ಮೆಡಿಕಲ್ ಕ್ಯಾಂಪ್ ಗಳು ಕೆಲಸ ಮಾಡ್ತಿವೆ. ಕೇಂದ್ರ ಸರ್ಕಾರ ಕೂಡ ಕ್ವಿಕ್ ರೆಸ್ಪಾನ್ಸ್ ಟೀಂ ಕಳುಹಿಸಲು ಮುಂದಾಗಿದೆ. ಇದು ಜನರ ಆರೋಗ್ಯದ ಮೇಲೆ ನಿಗಾವಹಿಸಲಿದೆ.

ರಕ್ಷಣಾ ಪಡೆ ಜನರಿಗೆ ಆಹಾರ, ಅಗತ್ಯ ವಸ್ತುಗಳನ್ನು ನೀಡುವ ಜೊತೆಗೆ ಔಷಧಿ, ಮಾತ್ರೆಗಳನ್ನು ನೀಡ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ 13 ಜನರ ತಂಡವನ್ನು ಕೇರಳಕ್ಕೆ ಕಳುಹಿಸಿದೆ. ಅವ್ರು ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ರಾಜ್ಯದ ವೈದ್ಯಕೀಯ ತಂಡಕ್ಕೆ ನೆರವಾಗಲಿದ್ದಾರೆ. ಜನರಿಗೆ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ನೀಡಲಾಗ್ತಿದೆ. ಪಂಚಾಯತಿಗಳಲ್ಲಿ ಕೌನ್ಸಿಲಿಂಗ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...